ADVERTISEMENT

ವೇಟ್‌ಲಿಫ್ಟಿಂಗ್: ಜೆರೆಮಿ ಕೈತಪ್ಪಿದ ಕಂಚು

ಪಿಟಿಐ
Published 25 ಮೇ 2021, 21:12 IST
Last Updated 25 ಮೇ 2021, 21:12 IST
ಜೆರೆಮಿ ಲಾಲ್‌ರಿನ್ನುಂಗಾ– ರಾಯಿಟರ್ಸ್ ಸಂಗ್ರಹ ಚಿತ್ರ
ಜೆರೆಮಿ ಲಾಲ್‌ರಿನ್ನುಂಗಾ– ರಾಯಿಟರ್ಸ್ ಸಂಗ್ರಹ ಚಿತ್ರ   

ತಾಷ್ಕೆಂಟ್‌: ಭಾರತದ ಜೆರೆಮಿ ಲಾಲ್‌ರಿನ್ನುಂಗಾ ಅವರು ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕೂದಲೆಳೆ ಅಂತರದಿಂದ ಪದಕ ತಪ್ಪಿಸಿಕೊಂಡರು. 67 ಕೆಜಿ ವಿಭಾಗದಲ್ಲಿ ಮಂಗಳವಾರ ನಾಲ್ಕನೇ ಸ್ಥಾನ ಗಳಿಸಿದರು. ಇದರಿಂದಾಗಿ ಅವರ ಒಲಿಂಪಿಕ್ ಅರ್ಹತೆಗೆ ಹಿನ್ನಡೆಯಾಗಿದೆ.

18ರ ಹರೆಯದ ಜೆರೆಮಿ, ಒಟ್ಟು 300 ಕೆಜಿ (ಸ್ನ್ಯಾಚ್‌ನಲ್ಲಿ 135 ಮತ್ತು ಕ್ಲೀನ್ ಆ್ಯಂಡ್‌ ಜೆರ್ಕ್‌ನಲ್ಲಿ 165) ಭಾರ ಎತ್ತಿದರು. ಕೇವಲ ಒಂದು ಕೆಜಿ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು.

ಟರ್ಕಿಯ ಜೋಡಿ ಮುಹಮ್ಮದ್ ಫುರ್ಕಾನ್ ಒಜ್ಬೆಕ್‌ (141+176, ಒಟ್ಟು 317 ಕೆಜಿ) ಮತ್ತು ಯುಸೂಫ್‌ ಫೆಹ್ಮಿ ಜೆಂಕ್‌ (133+168, ಒಟ್ಟು 301 ಕೆಜಿ) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕಜಕಸ್ತಾನದ ಅಕ್ಮೊಲ್ದಾ ಸೈರಾಮ್ಜೆಕ್ (132+176, ಒಟ್ಟು 308 ಕೆಜಿ) ಬೆಳ್ಳಿ ಪದಕ ಗೆದ್ದರು.

ADVERTISEMENT

ಇಲ್ಲಿ 313 ಕೆಜಿ ಸಾಧನೆ ಮಾಡಿದ್ದರೆ ಜೆರೆಮಿ ಅವರಿಗೆ ಟೋಕಿಯೊ ಟಿಕೆಟ್ ಗಳಿಸುವ ಅವಕಾಶವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.