ADVERTISEMENT

ವಿಶ್ವ ಯುವ ಚೆಸ್‌: ಪ್ರಗ್ನಾನಂದ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 18:33 IST
Last Updated 11 ಅಕ್ಟೋಬರ್ 2019, 18:33 IST

ಮುಂಬೈ: ಆತಿಥೇಯ ಭಾರತದ ಆಟಗಾರರು, ವಿಶ್ವ ಯುವ ಚೆಸ್‌ ಚಾಂಪಿಯನ್‌ಷಿಪ್‌ನ ಅಂತಿಮ ದಿನವಾದ ಶನಿವಾರ ಕೆಲವು ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ 18 ವರ್ಷದೊಳಗಿನವರ ಓಪನ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಹಾದಿಯಲ್ಲಿದ್ದಾರೆ.

ಡಬ್ಲ್ಯುಐಎಂ ವಂತಿಕಾ ಅಗರವಾಲ್‌ (18 ವರ್ಷದೊಳಗಿನ ಬಾಲಕಿಯರು), ಕ್ಯಾಂಡಿಡೇಟ್‌ ಮಾಸ್ಟರ್‌ ಅರಣ್ಯಕ್ ಘೋಷ್‌ (16 ವರ್ಷದೊಳಗಿನವರ ಓಪನ್‌ ವಿಭಾಗ), ಎಲ್‌.ಆರ್‌.ಶ್ರೀಹರಿ (14 ವರ್ಷದೊಳಗಿನವರ ಓಪನ್‌) ತಮ್ಮ ವಯೋವರ್ಗಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಬೆಳ್ಳಿಯ ಪದಕದ ಅವಕಾಶ ಹೊಂದಿದ್ದಾರೆ.

ಪ್ರಗ್ನಾನಂದ, ಶುಕ್ರವಾರ ನಡೆದ 10ನೇ ಸುತ್ತಿನಲ್ಲಿ ಲಿಥುವೇನಿಯಾದ ಐಎಂ ಪೌಲಿಸ್‌ ಪುಲ್ಟಿನೆವಿಸಿಯಸ್‌ ಅವರನ್ನು ಸೋಲಿಸಿ ಒಟ್ಟು 8.5 ಅಂಕ ಸಂಗ್ರಹಿಸಿದ್ದಾರೆ. ಅವರು ಎರಡನೇ ಸ್ಥಾನ ಪಡೆದ ಅರ್ಮೇನಿಯಾದ ಜಿಎಂ ಶಂತ್‌ ಸರ್ಗಸ್ಯಾನ್‌ ಅವರಿಗಿಂತ ಅರ್ಧ ಪಾಯಿಂಟ್‌ ಮುಂದಿದ್ದಾರೆ. ಶನಿವಾರ ಆಂತಿಮ ಸುತ್ತಿನ ಪಂದ್ಯಗಳು ನಡೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.