ADVERTISEMENT

ಕುಸ್ತಿ: ಸುಶೀಲ್‌ ಕುಮಾರ್‌ಗೆ ನಿರಾಸೆ

ಪಿಟಿಐ
Published 9 ಆಗಸ್ಟ್ 2019, 20:07 IST
Last Updated 9 ಆಗಸ್ಟ್ 2019, 20:07 IST

ನವದೆಹಲಿ: ಸುಮಾರು ಒಂದು ವರ್ಷದ ನಂತರ ‘ಮ್ಯಾಟ್‌’ಗಿಳಿದ ಭಾರತದ ಪ್ರಮುಖ ಪೈಲ್ವಾನ್‌ ಸುಶೀಲ್‌ ಕುಮಾರ್‌ ಬಹುನಿರೀಕ್ಷಿತ ಪುನರಾಗಮನದಲ್ಲಿ ನಿರಾಶೆ ಅನುಭವಿಸಿದರು.

ಬೆಲಾರಸ್‌ನ ಮಿನ್ಸ್ಕ್‌ನಲ್ಲಿ ನಡೆದ ಮೆಡ್ವೆಡ್‌ ಟೂರ್ನಿಯ 74 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ವಿಶ್ವದ ಐದನೇ ಕ್ರಮಾಂಕದ ಪೈಲ್ವಾನ್‌ ಬೆಕ್ಜೋದ್‌ ಅಬ್ದುರಖಮೋವ್‌, ಭಾರತದ ಕುಸ್ತಿಪಟುವನ್ನು ಸೋಲಿಸಿದರು.

ಹಾಲಿ ಏಷ್ಯನ್‌ ಚಾಂಪಿಯನ್ ಆಗಿರುವ ಉಜ್ಬೇಕಿಸ್ತಾನದ ಬೆಕ್ಜೋದ್‌, ಸುಶೀಳ್‌ ಅವರ ಬಲಗಾಲಿನ ಮೇಲೆ ಹಿಡಿತ ಸಾಧಿಸಿ ನಾಲ್ಕು ಅಂಕ ಪಡೆದರು. ಎರಡು ಬಾರಿ ಮ್ಯಾಟಿನಾಚೆ ತಳ್ಳಿ ಮತ್ತೆರಡು ಅಂಕ ಗಳಿಸಿದರು. ಸುಶೀಲ್‌ ಕುಮಾರ್‌ ನಂತರ ಚೇತರಿಸಿದಂತೆ ಕಾಣಲಿಲ್ಲ. 2018ರ ಜಕಾರ್ತಾ ಏಷ್ಯನ್‌ ಗೇಮ್ಸ್‌ ನಂತರ ಇದು ಸುಶೀಲ್‌ ಅವರ ಮೊದಲ ಸೆಣಸಾಟ. ಜಕಾರ್ತಾದಲ್ಲೂ ಅವರು ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.