ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

ಪಿಟಿಐ
Published 18 ಸೆಪ್ಟೆಂಬರ್ 2025, 15:48 IST
Last Updated 18 ಸೆಪ್ಟೆಂಬರ್ 2025, 15:48 IST
   

ಝಾಗ್ರೆಬ್‌ (ಕ್ರೊವೇಷ್ಯಾ): ಭಾರತದ ಗ್ರೀಕೊ ರೋಮನ್‌ ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವೈಫಲ್ಯ ಅನುಭವಿಸಿದರು. ಕಣದಲ್ಲಿದ್ದ ನಾಲ್ವರು ಪೈಲ್ವಾನರಿಗೆ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಪುರುಷರ 55 ಕೆ.ಜಿ ವಿಭಾಗದಲ್ಲಿ ಅನಿಲ್‌ ಮೋರ್‌ ಕೇವಲ 13 ಸೆಕೆಂಡ್‌ಗಳಲ್ಲಿ ಸೋಲೊಪ್ಪಿಕೊಂಡರು. ವಿಶ್ವದ ಅಗ್ರಮಾನ್ಯ ಕುಸ್ತಿಪಟು ಎಲ್ಡಾನಿಜ್ ಅಜಿಜ್ಲಿ (ಅಜರ್‌ಬೈಜಾನ್‌) ಅವರಿಗೆ ಅನಿಲ್‌ ಸುಲಭವಾಗಿ ಶರಣಾದರು. 

77 ಕೆ.ಜಿ ವಿಭಾಗದಲ್ಲಿ ಅಮನ್ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಪಾನ್‌ನ ನವೋ ಕುಸಾಕಾ ವಿರುದ್ಧ ಸೋತರು. 82 ಕೆ.ಜಿ ವಿಭಾಗದಲ್ಲಿ ರಾಹುಲ್ 1–7ರಿಂದ ಕಜಕಿಸ್ತಾನದ ಅಲ್ಮಿರ್ ಟೊಲೆಬಾಯೆವ್ ವಿರುದ್ಧ ಪರಾಭವಗೊಂಡರು.

ADVERTISEMENT

130 ಕೆ.ಜಿ ವಿಭಾಗದಲ್ಲಿ ಸೋನು 0-8ರಿಂದ ಕ್ರೊವೇಷ್ಯಾದ ಮಾರ್ಕೊ ಕೊಸ್ಸೆವಿಕ್ ವಿರುದ್ಧ ಸೋಲುಂಡರು.

ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಅಂತಿಮ್‌ ಪಂಘಲ್ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ಅವರು ಸ್ವೀಡನ್‌ನ ಎಮ್ಮಾ ಜೊನ್ನಾ ಡೆನಿಸ್ ಮಾಲ್ಮ್‌ಗ್ರೆನ್ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.