ADVERTISEMENT

ಕಬಡ್ಡಿ: ತವರಿನಲ್ಲಿ ಯೋಧಾ ಶುಭಾರಂಭ

ಪಿಟಿಐ
Published 5 ಅಕ್ಟೋಬರ್ 2019, 15:49 IST
Last Updated 5 ಅಕ್ಟೋಬರ್ 2019, 15:49 IST
ಯು.ಪಿ.ಯೋಧಾ ತಂಡದ ರೈಡರ್ ದಬಾಂಗ್ ಡೆಲ್ಲಿ ತಂಡದ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದರು
ಯು.ಪಿ.ಯೋಧಾ ತಂಡದ ರೈಡರ್ ದಬಾಂಗ್ ಡೆಲ್ಲಿ ತಂಡದ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದರು   

ನೋಯ್ಡಾ: ಮೋನು ಗೋಯತ್ (11;10 ಟಚ್ ಪಾಯಿಂಟ್ಸ್‌) ಮತ್ತು ಶ್ರೀಕಾಂತ್ ಜಾಧವ್ (9 ಪಾಯಿಂಟ್ಸ್‌) ಪ್ರಭಾವಿ ರೈಡಿಂಗ್ ಮೂಲಕವೂ ನಿತೇಶ್ ಕುಮಾರ್ –ಸುಮಿತ್ ಜೋಡಿ (ಕ್ರಮವಾಗಿ 6, 5 ಪಾಯಿಂಟ್ಸ್) ಅಮೋಘ ಟ್ಯಾಕ್ಲಿಂಗ್ ಮೂಲಕವೂ ಶಹೀದ್ ವಿಜಯ್‌ ಸಿಂಗ್ ಪಥಿಕ್ ಕ್ರೀಡಾಂಗಣದಲ್ಲಿ ಮಿಂಚಿದರು.

ಇವರ ಅಬ್ಬರದ ಆಟದಿಂದಾಗಿ ಯು.ಪಿ.ಯೋಧಾ ತಂಡ ‍ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರ ಭರ್ಜರಿ ಜಯ ಸಾಧಿಸಿತು. ದಬಾಂಗ್ ಡೆಲ್ಲಿ ತಂಡವನ್ನು 50–33ರಲ್ಲಿ ಮಣಿಸಿ ತವರಿನ ಅಂಗಣದ ಮೊದಲ ಪಂದ್ಯದಲ್ಲೇ ಜಯಭೇರಿ ಮೊಳಗಿಸಿತು.

ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಗಳಿಸಿರುವ ಮತ್ತು ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಡೆಲ್ಲಿ ತಂಡ ನವೀನ್ ಕುಮಾರ್, ಜೋಗಿಂದರ್ ಸಿಂಗ್ ಮುಂತಾದವರಿಗೆ ವಿಶ್ರಾಂತಿ ನೀಡಿತ್ತು. ಇದು, ಯೋಧಾ ತಂಡದ ಹಾದಿಯನ್ನು ಸುಲಭ ಮಾಡಿತು. ಆರಂಭದ ಏಳನೇ ನಿಮಿಷದಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿದ ಯೋಧಾ ಒಟ್ಟು ಮೂರು ಬಾರಿ ಆ ತಂಡದ ಅಂಗಣವನ್ನು ಖಾಲಿ ಮಾಡಿತು.

ADVERTISEMENT

ಡೆಲ್ಲಿಯ ನೀರಜ್ ನರ್ವಾಲ್ 11, ಸೋಮವೀರ್ ಮತ್ತು ಮೆರಾಜ್ ಶೇಕ್ ಕ್ರಮವಾಗಿ 9 ಮತ್ತು 8 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.