ADVERTISEMENT

ಪ್ರೀಕ್ವಾರ್ಟರ್‌ಫೈನಲ್‌ಗೆ ಅಂಕಿತ್, ಮನೀಷ್‌

ವಿಶ್ವ ಯೂತ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಜುಗ್ನೂಗೆ ಸೋಲು

ಪಿಟಿಐ
Published 17 ಏಪ್ರಿಲ್ 2021, 11:32 IST
Last Updated 17 ಏಪ್ರಿಲ್ 2021, 11:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಏಷ್ಯನ್ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ, ಭಾರತದ ಅಂಕಿತ್ ನರ್ವಾಲ್‌ ಹಾಗೂ ಮನೀಷ್‌ ಅವರುಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

64 ಕೆಜಿ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಅಂಕಿತ್‌ 5–0ಯಿಂದ ಉಜ್ಬೆಕಿಸ್ತಾನದ ಅಖ್ಮದೊನ್‌ ಅಖ್ಮೆದೊವ್‌ ಅವರನ್ನು ಮಣಿಸಿದರು. 75 ಕೆಜಿ ವಿಭಾಗದ ಬೌಟ್‌ನಲ್ಲಿ ಮನೀಷ್‌ 4–1ರಿಂದ ಇಸ್ರೇಲ್‌ನ ಡೇನಿಯಲ್‌ ಇಲುಶೊನೊಕ್‌ ಅವರಿಗೆ ಸೋಲಿನ ಪಂಚ್‌ ನೀಡಿದರು.

ಮುಂದಿನ ಸುತ್ತಿನಲ್ಲಿ ಅಂಕಿತ್, ಪೋಲೆಂಡ್‌ನ ಒಲಿವರ್‌ ಜಮೊಸ್ಕಿ ಎದುರು ಸೆಣಸಲಿದ್ದಾರೆ. ಮನೀಷ್‌ ಅವರು ಜೋರ್ಡಾನ್‌ನ ಅಬ್ದುಲ್ಲಾ ಅಲಾರಾಗ್ ಎದುರು ಕಣಕ್ಕಿಳಿಯಲಿದ್ದಾರೆ.

ADVERTISEMENT

ಸೂಪರ್ ಹೆವಿವೇಟ್‌ನ 91+ ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಜುಗ್ನೂ, ಮೊದಲ ಸುತ್ತಿನಲ್ಲೇ ಹಂಗರಿಯ ಲೆವೆಂಟೆ ಕಿಸ್ ಎದುರು ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.