ADVERTISEMENT

ಯೂತ್ ಒಲಿಂಪಿಕ್ಸ್‌ಗೆ ವೈಭವದ ಚಾಲನೆ

ಭಾರತದ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡ ಶೂಟರ್‌ ಮನು ಭಾಕರ್‌

ಪಿಟಿಐ
Published 7 ಅಕ್ಟೋಬರ್ 2018, 20:18 IST
Last Updated 7 ಅಕ್ಟೋಬರ್ 2018, 20:18 IST
ಯೂತ್‌ ಒಲಿಂಪಿಕ್ಸ್ ಕೂಟದ ಉದ್ಘಾಟನಾ ಸಮಾರಂಭದಕ್ಕೆ ಮೆರುಗು ತುಂಬಿದ ಸುಡುಮದ್ದು ಪ್ರದರ್ಶನ ಪಿಟಿಐ ಚಿತ್ರ
ಯೂತ್‌ ಒಲಿಂಪಿಕ್ಸ್ ಕೂಟದ ಉದ್ಘಾಟನಾ ಸಮಾರಂಭದಕ್ಕೆ ಮೆರುಗು ತುಂಬಿದ ಸುಡುಮದ್ದು ಪ್ರದರ್ಶನ ಪಿಟಿಐ ಚಿತ್ರ   

ಬ್ಯೂನಸ್ ಐರಿಸ್: ವೈವಿಧ್ಯಮಯ ಕಲಾಕಾರ್ಯಕ್ರಮಗಳು, ಇಲ್ಲಿ ಶನಿವಾರ ರಾತ್ರಿ ನಡೆದ ಯುವ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಮೆರುಗು ತುಂಬಿದವು.

ಇದೇ ಮೊದಲ ಬಾರಿ ಉದ್ಘಾಟನಾ ಕಾರ್ಯಕ್ರಮದ ‍ಪಥ ಸಂಚಲನವನ್ನು ರಸ್ತೆಯಲ್ಲಿ ನಡೆಸಲಾಗಿತ್ತು. ಕ್ರೀಡಾಪಟುಗಳು ಸಂಭ್ರಮದಿಂದ ಹೆಜ್ಜೆ ಹಾಕುತ್ತಿದ್ದರೆ, ಬೀದಿಯ ಇಕ್ಕೆಲಗಳಲ್ಲಿ ನಿಂತಿದ್ದ ಎರಡು ಲಕ್ಷಕ್ಕೂ ಅಧಿಕ ಮಂದಿ ವೈಭವೋಪೇತ ನೋಟಕ್ಕೆ ಮರುಳಾದರು.

ಶೂಟರ್‌ ಮನು ಭಾಕರ್ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದರು.

ADVERTISEMENT

ಬೀದಿಯಲ್ಲಿ ನಡೆದ ಪಥಸಂಚಲನದ ನಂತರ ರಂಗು ರಂಗಿನ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಥಾಯ್ಲೆಂಡ್‌ನ ‘ವೈಲ್ಡ್ ಬೋರ್ಸ್’ ತಂಡದವರು ಪ್ರದರ್ಶಿಸಿದ ಕಾರ್ಯಕ್ರಮಗಳು ಜನರ ಮನತಣಿಸಿದವು.

204 ದೇಶಗಳ 15ರಿಂದ 18ರ ವಯೋಮಾನದ 4000 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು ಭಾರತ 46 ಅಥ್ಲೀಟ್‌ಗಳು ಒಳಗೊಂಡಂತೆ ಒಟ್ಟು 68 ಮಂದಿಯ ತಂಡವನ್ನು ಕಳುಹಿಸಿದೆ. ಒಟ್ಟು 13 ವಿಭಾಗಗಳಲ್ಲಿ ಭಾರತ ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.