ADVERTISEMENT

ಉದ್ಯೋಗಾವಕಾಶ... ಅಲ್ಲಲ್ಲಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ದಲ್ಲಿ 3149 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-4-2012.
ಹುದ್ದೆ ಹೆಸರು: ಕ್ಲರ್ಕ್
ಒಟ್ಟು ಹುದ್ದೆ: 3149
ವೇತನ ಶ್ರೇಣಿ: ರೂ. 7200-19300.
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಹೈಯರಿ ಸೆಕೆಂಡರಿ ಸ್ಕೂಲ್ (ಎಚ್‌ಎಸ್‌ಸಿ) ಅಥವಾ 12ನೇ ತರಗತಿ (10+2+3 ಮಾದರಿಯಲ್ಲಿ) ಅಥವಾ 11ನೇ ತರಗತಿ (11+4 ಮಾದರಿ) ಅಥವಾ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು.
ವಯೋಮಿತಿ: 21 ರಿಂದ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 200.
ಆಯ್ಕೆ ವಿಧಾನ: ಸಂದರ್ಶನ
* ಮೇ-ಜೂನ್‌ನಲ್ಲಿ ಪರೀಕ್ಷೆ ನಡೆಯಲಿದೆ.
* ಕರ್ನಾಟಕದಲ್ಲೂ 104 ಹುದ್ದೆಗಳಿವೆ.
ಹೆಚ್ಚಿನ ಮಾಹಿತಿಗೆ www.bankofindia.co.in


ಕೇಂದ್ರ ನಾಗರಿಕ ಸೇವಾ ಆಯೋಗ
ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ದಲ್ಲಿ 433 ಹುದ್ದೆಗಳನ್ನು (ವಿಶೇಷ ನೇಮಕಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-5-2012. 
ಹುದ್ದೆ ಹೆಸರು: 1) ಪಬ್ಲಿಕ್ ಪ್ರಾಸಿಕ್ಯೂಟರ್
ಒಟ್ಟು ಹುದ್ದೆ: 50; ವಿದ್ಯಾರ್ಹತೆ: ಕಾನೂನಿನಲ್ಲಿ ಪದವಿ.
ಹುದ್ದೆ ಹೆಸರು: 2) ಏರ್ ವರ್ದಿನೆಸ್ ಆಫೀಸರ್
ಒಟ್ಟು ಹುದ್ದೆ: 130
ವಿದ್ಯಾರ್ಹತೆ: ಪದವಿ (ಭೌತಶಾಸ್ತ್ರ ಅಥವಾ ಗಣಿತದಲ್ಲಿ) ಹಾಗೂ ಏರ್‌ಕ್ರಾಫ್ಟ್ ನಿರ್ವಹಣೆಯಲ್ಲಿ ಎರಡು ವರ್ಷಗಳ ಅನುಭವ.
ಹುದ್ದೆ ಹೆಸರು: 3) ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್
ಒಟ್ಟು ಹುದ್ದೆ: 253
ವಿದ್ಯಾರ್ಹತೆ: ಪದವಿ. ಕಂಪೆನಿ ಲಾ/ ಲೇಬರ್ ಲಾ/ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಿಪ್ಲೊಮಾ.
ವೇತನ ಶ್ರೇಣಿ: ರೂ. 15600-39100.
ವಯೋಮಿತಿ: 35 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.50.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ಹೆಚ್ಚಿನ ಮಾಹಿತಿಗೆ http://upsc.gov.in

ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್

ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ (ಎಚ್‌ಪಿಸಿಎಲ್) 70 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-4-2012.
ಹುದ್ದೆಗಳ ವಿವರ: 1) ಮೆಕ್ಯಾನಿಕಲ್ 15 ಹುದ್ದೆ, ಎಲೆಕ್ಟ್ರಿಕಲ್ 5 ಹುದ್ದೆ, ಸಿವಿಲ್ 5 ಹುದ್ದೆ, ಇನ್‌ಸ್ಟ್ರುಮೆಂಟೇಷನ್ 5 ಹುದ್ದೆ, ಕೆಮಿಕಲ್ 40 ಹುದ್ದೆ.
ಒಟ್ಟು ಹುದ್ದೆ: 70
ವೇತನ ಶ್ರೇಣಿ: ಗ್ರೇಡ್ `ಬಿ~ ರೂ. 29100-54500. ಗ್ರೇಡ್ `ಸಿ~ ರೂ. 32900-58000.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ (ಮೆಕಾನಿಕಲ್/ ಸಿವಿಲ್/ ಎಲೆಕ್ಟ್ರಿಕಲ್/ ಇನ್‌ಸ್ಟ್ರುಮೆಂಟೇಷನ್/ ಕೆಮಿಕಲ್)
ವಯೋಮಿತಿ: ಗ್ರೇಡ್ `ಬಿ~ 30 ವರ್ಷ. ಗ್ರೇಡ್ `ಸಿ~ 33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಹೆಚ್ಚಿನ ಮಾಹಿತಿಗೆ http://jobs.hpcl.co.in

ದೇನಾ ಬ್ಯಾಂಕ್
ದೇನಾ ಬ್ಯಾಂಕ್‌ನಲ್ಲಿ 1090 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-5-2012. 
ಹುದ್ದೆ ಹೆಸರು: ಕ್ಲರ್ಕ್
ಒಟ್ಟು ಹುದ್ದೆ: 1090; ವೇತನ ಶ್ರೇಣಿ: ರೂ. 7200-19300.
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ 10+2 ಉತ್ತೀರ್ಣ ಅಥವಾ ಪದವಿ ಹಾಗೂ ಐಬಿಪಿಎಸ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹ ಅಂಕಗಳು.
ವಯೋಮಿತಿ: 18ರಿಂದ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 150.
ಆಯ್ಕೆ ವಿಧಾನ: ಸಂದರ್ಶನ
* ಕರ್ನಾಟಕದಲ್ಲೂ 39 ಹುದ್ದೆಗಳಿವೆ.
ಹೆಚ್ಚಿನ ಮಾಹಿತಿಗೆ www.denabank.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.