ADVERTISEMENT

ಕಾಗದ ಸರಿದದ್ದು ಯಾಕೆ?

ಮಾಡಿ ನಲಿ ಸರಣಿ - 26

ಪ್ರೊ.ಸಿ ಡಿ ಪಾಟೀಲ್
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST
ಕಾಗದ ಸರಿದದ್ದು ಯಾಕೆ?
ಕಾಗದ ಸರಿದದ್ದು ಯಾಕೆ?   

ಪ್ರಶ್ನೆ: 1. ಸಾವಕಾಶವಾಗಿ ಕಾಗದ ಎಳೆದಾಗ ಲೋಟ ಹೇಗೆ ಸರಿಯುತ್ತಿತ್ತು? ಯಾಕೆ?

2. ಕಾಗದವನ್ನು ತ್ವರಿತವಾಗಿ ಎಳೆದಾಗ ಲೋಟ ಹೇಗೆ ಸರಿಯಿತು? ಯಾಕೆ?

ಉತ್ತರ:
1. ಕಾಗದವನ್ನು ಸಾವಕಾಶವಾಗಿ ಎಳೆದಾಗ ಅದರ ಜೊತೆಗೆ ಲೋಟ ಕೂಡಾ ಸರಿಯುತ್ತಿತ್ತು. ಯಾಕೆಂದರೆ ಕಾಗದ ಮತ್ತು ಲೋಟದ  ಮಧ್ಯೆ ಘರ್ಷಣೆ (Friction) ಏರ್ಪಟ್ಟು ಅದು ಕಾಗದದ ಜೊತೆ ಸರಿಯುತ್ತಿತ್ತು.

2. ಕಾಗದವನ್ನು ಒಂದೇ ಹೊಡೆತಕ್ಕೆ ತೀವ್ರವಾಗಿ ಎಳೆದಿದ್ದರಿಂದ ಲೋಟವು ಟೇಬಲ್ ಮೇಲೇ ಉಳಿದು, ಕಾಗದ ಮಾತ್ರ ಹೊರಬಂತು. ಯಾಕೆಂದರೆ ಇಲ್ಲಿ ಕಾಗದಕ್ಕೆ ಮಾತ್ರ ಚಲನೆ ದೊರೆಯಿತು. ನಿಂತ ಬಸ್ಸು ಒಮ್ಮೆಲೇ ಮುಂದೆ ಚಲಿಸಿದರೆ ನಿಂತವರು ಹಿಂದಕ್ಕೆ ಬೀಳುವುದಿಲ್ಲವೇ ಹಾಗೆ.

ಸಾಮಗ್ರಿ
ಟೇಬಲ್, ಎ4 ಅಳತೆಯ ಕಾಗದ, ಲೋಟ, ನೀರು.

1. ಚಿತ್ರದಲ್ಲಿ ತೋರಿಸಿರುವಂತೆ ಕಾಗದವನ್ನು ಮುಕ್ಕಾಲು ಭಾಗ ಟೇಬಲ್ ಮೇಲೆ ಇರುವಂತೆ ಇಡಿ.

2. ಟೇಬಲ್ ಮೇಲಿನ ಕಾಗದದ ತುದಿಯ ಕಡೆಗೆ ನೀರು ತುಂಬಿದ ಹಾಗೂ ತಳ ಒಣಗಿದ ಲೋಟವನ್ನು ಇಡಿ.

3. ಕಾಗದದ ಇನ್ನೊಂದು ತುದಿಯನ್ನು ಹಿಡಿದುಕೊಂಡು ಸಾವಕಾಶವಾಗಿ ಎಳೆಯಿರಿ.

4. ಲೋಟವು ಟೇಬಲ್ ತುದಿಗೆ ಬಂದಾಗ ಎಳೆಯುವುದನ್ನು ನಿಲ್ಲಿಸಿ.

5. ನಂತರ ಕಾಗದವನ್ನು ಒಂದೇ ಬಾರಿಗೆ ತ್ವರಿತವಾಗಿ ಎಳೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT