ADVERTISEMENT

ತೇಲುವ ಕೊಬ್ಬರಿ ಎಣ್ಣೆಯ ಹನಿ

ಮಾಡಿ ಕಲಿ ಸರಣಿ–57

ಪ್ರೊ.ಸಿ ಡಿ ಪಾಟೀಲ್
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಬೇಕಾಗುವ ಸಾಮಗ್ರಿ: ಗ್ಲಾಸು, ನೀರು, ಸ್ಪಿರಿಟ್, ಗಾಜಿನ ಸಲಾಕೆ, ಕೊಬ್ಬರಿ ಎಣ್ಣೆ, ಇಂಕ್ ಡ್ರಾಪರ್

ವಿಧಾನ: ಒಂದು ಗ್ಲಾಸಿನಲ್ಲಿ ಸಮ ಪ್ರಮಾಣದಲ್ಲಿ ನೀರು ಹಾಗೂ ಸ್ಪಿರಿಟ್ ತೆಗೆದುಕೊಳ್ಳಿ. ಮಿಶ್ರಣವನ್ನು ಒಂದು ಗಾಜಿನ ಸಲಾಕೆಯಿಂದ ಕಲಕಿಸಿ. ಇಂಕ್ ಡ್ರಾಪರ್ ಸಹಾಯದಿಂದ ಈ ಮಿಶ್ರಣದಲ್ಲಿ ಒಂದು ಹನಿ ಕೊಬ್ಬರಿ ಎಣ್ಣೆಯನ್ನು ಹಾಕಿ.

ಪ್ರಶ್ನೆ: ಕೊಬ್ಬರಿ ಎಣ್ಣೆಯ ಹನಿ ಎಲ್ಲಿದೆ? ಯಾಕೆ?
ಉತ್ತರ:
ನೀರು ಹಾಗೂ ಸ್ಪಿರಿಟ್ ಮಿಶ್ರಣವಾಗಿ ಒಂದು ದ್ರಾವಣ ತಯಾರಾಗುತ್ತದೆ. ಕೊಬ್ಬರಿ ಎಣ್ಣೆಯ ಹನಿ ದ್ರಾವಣದ ಮಧ್ಯದಲ್ಲಿ ತೇಲುತ್ತದೆ. ಯಾಕೆಂದರೆ ಈ ಮಿಶ್ರಣ ಹಾಗೂ ಕೊಬ್ಬರಿ ಎಣ್ಣೆಯ ಸಾಂದ್ರತೆ ಸಮ ಇವೆ. ಕೊಬ್ಬರಿ ಎಣ್ಣೆಯನ್ನು ಕೇವಲ ನೀರಿಗೆ ಹಾಕಿದಾಗ ಅದು ತೇಲುತ್ತದೆ. ಯಾಕೆಂದರೆ ಕೊಬ್ಬರಿ ಎಣ್ಣೆಯ ಸಾಂದ್ರತೆ ನೀರಿಗಿಂತ ಕಡಿಮೆ. ಕೊಬ್ಬರಿ ಎಣ್ಣೆಯನ್ನು ಸ್ಪಿರಿಟ್‌ಗೆ ಹಾಕಿದಾಗ ಅದು ಮುಳುಗುತ್ತದೆ. ಯಾಕೆಂದರೆ ಅದರ ಸಾಂದ್ರತೆ ಸ್ಪಿರಿಟ್‌ಗಿಂತ ಹೆಚ್ಚು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.