ಸಾಮಗ್ರಿ: ಮೆಕ್ಕೆ ಜೋಳದ ಬೀಜಗಳು, ಮಣ್ಣು, ಅಗಲ ಬಾಯಿಯ ಪಾತ್ರೆ, ನೀರು.
ವಿಧಾನ 1. ಒಂದು ಪ್ಲಾಸ್ಟಿಕ್ ಬಟ್ಟಲನ್ನು ತೆಗೆದುಕೊಳ್ಳಿ ಅದರಲ್ಲಿ ಮುಕ್ಕಾಲಕ್ಕೂ ಹೆಚ್ಚು, ಪುಡಿ ಮಾಡಿದ ತೋಟದ ಮಣ್ಣನ್ನು ತೆಗೆದುಕೊಳ್ಳಿ.
2. ಚಿತ್ರದಲ್ಲಿ ತೋರಿಸಿದಂತೆ ಮೂರು ಮೆಕ್ಕೆಜೋಳದ ಬೀಜಗಳನ್ನು ಮಣ್ಣಿನಲ್ಲಿ ನೆಟ್ಟು, ಎರಡು ದಿನಗಳಿಗೊಮ್ಮೆ ನೀರುಣಿಸಿ. ಪಾತ್ರೆಯಲ್ಲಿ ನೀರು ನಿಲ್ಲುವಂತೆ ಹಾಕಬಾರದು.
3. 8-10 ದಿವಸ ನೀರುಣಿಸಿ.
ಪ್ರಶ್ನೆ: 1. ಬೀಜದಿಂದ ಹೊರಟ ಬೇರಿನ ಮೂಲ (Radicle) ಹಾಗೂ ಮೊಳಕೆಗಳು (Plunule) ಹೇಗೆ ಬೆಳೆಯುತ್ತವೆ? ಏಕೆ?
ಉತ್ತರ : ಎಡಗಡೆ ಬೀಜದ ಕೆಳಭಾಗದಿಂದ ಬೇರು ಮೂಲ ಹಾಗೂ ಮೇಲ್ಭಾಗದಿಂದ ಮೊಳಕೆಗಳು ನೇರವಾಗಿ ಬೆಳೆಯುತ್ತವೆ. ಮದ್ಯದ ಬೀಜದಲ್ಲಿ ಬೇರು ಮೂಲ ಹಾಗೂ ಮೊಳಕೆಗಳು ನೇರವಾಗಿ ಬೆಳೆದು ಅನಂತರ ಬೇರು ಭೂಮಿಯ ಕಡೆಗೆ ಮತ್ತು ಮೊಳಕೆ ಅದರ ವಿರುದ್ಧ ದಿಕ್ಕಿಗೆ ಬೆಳೆಯುತ್ತವೆ.
ಕೊನೆಯ ಬೀಜದಲ್ಲಿ ಬೇರು ಮೂಲ ಹಾಗೂ ಮೊಳಕೆ ಹೊರಬಂದು ಚಿತ್ರದಲ್ಲಿ ತೋರಿಸಿದಂತೆ ಬೆಳೆಯುತ್ತವೆ. ಸಸ್ಯದಲ್ಲಿರುವ ಆಕ್ಸಿನ್‌ಗಳು ಇಂಥ ಬೆಳವಣಿಗೆಗೆ ಕಾರಣ. ಸಸ್ಯದಲ್ಲಿನ ಬೇರು ಭೂಮಿಯ (ಗುರುತ್ವಾಕರ್ಷಣೆಯ) ಕಡೆಗೆ ಹಾಗೂ ಕಾಂಡವು ಅದರ ವಿರುದ್ಧ ದಿಕ್ಕಿಗೆ ಬೆಳೆಯುತ್ತವೆ ಎಂದು ತಿಳಿಯುತ್ತದೆ. ಈ ಗುಣ ಬೀಜದಲ್ಲಿ ಇರದಿದ್ದರೆ ನಮಗೆ ಹಣ್ಣುಗಳೇ ಸಿಗುತ್ತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.