ADVERTISEMENT

ನೀರಿನ ಮೂರು ಮುಖ...!

ಮಾಡಿ ನಲಿ ಸರಣಿ - 20

ಪ್ರೊ ಸಿ ಡಿ ಪಾಟೀಲ್
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಪ್ರಶ್ನೆ
1. ಬಾಟಲಿಯ ಒಳಗೆ ಏನು ಬದಲಾವಣೆ ಕಾಣುತ್ತೀರಿ?
2. ನೀರಿನ ರೂಪಗಳಾವುವು?

ಉತ್ತರ
1. ಬಾಟಲಿಯಲ್ಲಿನ ಬಿಸಿ ನೀರು ಹಬೆಯ ರೂಪದಲ್ಲಿ ಪಸರಿಸುತ್ತದೆ. ಬಾಯಿಯ ಹತ್ತಿರ ಮಂಜುಗಡ್ಡೆ ಇರುವುದರಿಂದ ಆವಿ ತಂಪಾಗಿ ಮೋಡದಂತೆ ಕಾಣುತ್ತದೆ. ಸ್ವಲ್ಪ ಹೊತ್ತಿನ ನಂತರ ನೀರಿನ ಹನಿಗಳು ಕೆಳಗೆ ಬೀಳುತ್ತವೆ. ಮಳೆಯಾಗುವುದು ಹೀಗೆಯೇ.
2.  ನೀರಿನ ರೂಪಗಳು: ಆವಿ (Vapour), ದ್ರವ (Liquid) ಹಾಗೂ ಘನ (Solid).

ಸಾಮಗ್ರಿ: ಅಗಲ ಬಾಯಿಯ ಬಾಟಲಿ, ಬಿಸಿ ನೀರು, ತಗಡು, ಮಂಜುಗಡ್ಡೆ

ವಿಧಾನ
1. ಚಿತ್ರದಲ್ಲಿ ತೋರಿಸಿರುವಂತೆ ಒಂದು ಅಗಲ ಬಾಯಿಯ ಸ್ವಚ್ಛವಾದ ಬಾಟಲಿಯನ್ನು ತೆಗೆದುಕೊಳ್ಳಿ.
2. ಅದರಲ್ಲಿ ಅರ್ಧ ಭಾಗದಷ್ಟು ಸ್ವಲ್ಪ ಹೆಚ್ಚು ಬಿಸಿ ನೀರು ಹಾಕಿ.
3. ಬಾಯಿಯ ಮೇಲೆ ತಗಡಿನ ಮುಚ್ಚಳ ಇಟ್ಟು, ಅದರ ಮೇಲೆ 3-4 ಮಂಜುಗಡ್ಡೆಯ ತುಂಡುಗಳನ್ನು ಇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.