ADVERTISEMENT

ಮರದ ಬುಡದಲ್ಲೇಕೆ ತಂಪು?

ಮಾಡಿ ನಲಿ ಸರಣಿ 11

ಪ್ರೊ.ಸಿ ಡಿ ಪಾಟೀಲ್
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST
ಮರದ ಬುಡದಲ್ಲೇಕೆ ತಂಪು?
ಮರದ ಬುಡದಲ್ಲೇಕೆ ತಂಪು?   

ಸಾಮಗ್ರಿಗಳು:  ಅರಳಿ ಮರದ 4 ತಾಜಾ ಎಲೆಗಳು, ದಾರ, ಸ್ಟ್ಯಾಂಡ್, ಹರಳೆಣ್ಣೆ.

ವಿಧಾನ
1. ಒಂದೇ ಗಾತ್ರದ ನಾಲ್ಕು ತಾಜಾ ಅರಳಿ ಎಲೆಗಳನ್ನು ತೆಗೆದುಕೊಳ್ಳಿ.
2. ಚಿತ್ರದಲ್ಲಿ ತೋರಿಸಿದಂತೆ ಅವುಗಳನ್ನು ದಾರದಿಂದ ಕಟ್ಟಿ, ದಾರದ ತುದಿಗಳನ್ನು ಸ್ಟ್ಯಾಂಡಿಗೆ  ಕಟ್ಟಿ.
3. ಎಲೆಗಳಿಗೆ `ಅ' `ಬ' `ಕ' `ಡ' ಎಂದು ಹೆಸರಿಸಿ.
4.`ಬ' ಎಲೆಯ ತಳಭಾಗಕ್ಕೆ, `ಕ' ಎಲೆಯ ಮೇಲ್ಬಾಗಕ್ಕೆ ಹಾಗೂ  `ಡ' ಎಲೆಯ ಎರಡೂ ಬದಿಗೆ ಹರಳೆಣ್ಣೆಯನ್ನು ಸರಿಯಾಗಿ ಸವರಬೇಕು. `ಅ' ಎಲೆಯ ಯಾವ ಭಾಗಕ್ಕೂ ಹರಳೆಣ್ಣೆ ಸವರಬೇಡಿ.

ಪ್ರಶ್ನೆ:  5-6 ದಿನಗಳ ನಂತರ ಎಲ್ಲ ಎಲೆಗಳನ್ನೂ ಪರೀಕ್ಷಿಸಿ. ಎಲೆಗಳಲ್ಲಾದ ಬದಲಾವಣೆಗೆ ಕಾರಣವೇನು?

ಉತ್ತರ: `ಅ' ಮತ್ತು  `ಕ' ಎಲೆಗಳು ಬಾಡುತ್ತವೆ. ಯಾಕೆಂದರೆ ಎಲೆಯ ಕೆಳಗಿನ ಭಾಗದಲ್ಲಿ ಹೆಚ್ಚು ಪತ್ರ ರಂಧ್ರಗಳಿದ್ದು, ಅವುಗಳಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಾಷ್ಪ ವಿಸರ್ಜನೆಯಾಗುತ್ತದೆ. `ಬ' ಎಲೆಯಲ್ಲಿಯ ಹೆಚ್ಚು ಪತ್ರ ರಂಧ್ರಗಳನ್ನು ಮತ್ತು  `ಡ' ಎಲೆಯ ಎಲ್ಲ ಪತ್ರ ರಂಧ್ರಗಳನ್ನೂ ಹರಳೆಣ್ಣೆ ಸವರಿ ಬಂದ್ ಮಾಡಿರುವುದರಿಂದ ಬಾಷ್ಪ ವಿಸರ್ಜನೆ ಆಗುವುದಿಲ್ಲ. ಆದ್ದರಿಂದ ಅವು ಒಣಗದೆ ಹಾಗೆಯೇ ಉಳಿಯುತ್ತವೆ. ಬಾಷ್ಪ ವಿಸರ್ಜನೆಯು ಸಸ್ಯದಲ್ಲಿ ನೀರು ಮೇಲೇರಲು, ವಾತಾವರಣವನ್ನು ತಂಪಾಗಿಡಲು ಹಾಗೂ ಭೂಮಿಯಿಂದ ಲವಣಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT