ಭಾರತದಲ್ಲಿ ಐಷಾರಾಮಿ ಉದ್ಯಮ (ಲಕ್ಸುರಿ ಇಂಡಸ್ಟ್ರಿ) 1990ರ ಮಧ್ಯಭಾಗದಿಂದ ಬೆಳೆಯಲು ಆರಂಭಿಸಿತು.
ಹೊಸ ಸಹಸ್ರಮಾನದ ಆರಂಭದೊಂದಿಗೆ ಹಲವಾರು ಐಷಾರಾಮಿ, ನಿತ್ಯ ಬದುಕಿನ ಶ್ರಮ ಕಡಿಮೆ ಮಾಡುವ ಮತ್ತು ಉಲ್ಲಾಸ ಕೊಡುವ ಸರಕುಗಳ (ಸೌಂದರ್ಯವರ್ಧಕ, ಆಭರಣಗಳೂ ಸೇರಿ) ಬ್ರಾಂಡ್‌ಗಳು ದೊಡ್ಡ ಪ್ರಮಾಣದಲ್ಲೇ ಮಾರುಕಟ್ಟೆ ಪ್ರವೇಶಿಸಿದವು.
ಕಳೆದ ಅನೇಕ ವರ್ಷಗಳಿಂದ ಐಷಾರಾಮಿ ಉದ್ಯಮ ವಲಯ ವಾರ್ಷಿಕ ಶೇ 25-30ರ ದರದಲ್ಲಿ ಬೆಳೆಯುತ್ತಿದೆ. ಕಳೆದ ವರ್ಷ ಈ ಏರಿಕೆ ಪ್ರಮಾಣ ಶೇ 50-60ರ ಆಸುಪಾಸು ಎಂದು ಅಂದಾಜು. ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 855 ಲಕ್ಸುರಿ ಬ್ರಾಂಡ್‌ಗಳಿವೆ.
ಈ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದೆ. ಹೀಗಾಗಿ ಈ ಉದ್ಯಮದಲ್ಲಿ ವೃತ್ತಿ (ಕರಿಯರ್) ರೂಪಿಸಿಕೊಳ್ಳಲು ಬಯಸುತ್ತಿರುವ ವಿದ್ಯಾರ್ಥಿಗಳು ಪ್ರವೇಶಿಸಲು ಇದು ಸಕಾಲ.
ಗುಸ್ಸಿ, ಪೌಲ್ ಸ್ಮಿತ್, ಮರ್ಸಿಡಿಸ್ ಅಥವಾ ಬಿಎಂಡಬ್ಲ್ಯು ಮುಂತಾದ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದ ಕೆಲ ಪ್ರತಿಷ್ಠಿತ ಬ್ರಾಂಡ್‌ಗಳು. ಇಂಥ ಕಂಪೆನಿಗಳಲ್ಲಿ ಸೇರಲು ಭಾರೀ ಪೈಪೋಟಿ.
ಅದಕ್ಕೆ ಏನು ಮಾಡಬೇಕು? ಮೊಟ್ಟ ಮೊದಲು ಅತ್ಯದ್ಭುತ ಸಂವಹನ ಕೌಶಲ್ಯ ಇರಬೇಕು. ಸಂಪ್ರೀತ ವ್ಯಕ್ತಿತ್ವ ನಿಮ್ಮದಾಗಿರಬೇಕು. ಮಾರುಕಟ್ಟೆಯಲ್ಲಿ ನಾನಾ ವರ್ಗದ ಜನರ ಜೊತೆ ಮಾತನಾಡುವ, ಉತ್ಪನ್ನದ ವಿವರಣೆಯನ್ನು ಮನಮುಟ್ಟುವಂತೆ ನೀಡುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ಜನರೊಡನೆ ಮಾತನಾಡುವಾಗ ಮಾತುಗಳು `ಮೆದುಳಿನಿಂದ ಬರಕೂಡದು; ಹೃದಯದಿಂದ ಬರಬೇಕು.
ಯಾಕೆಂದರೆ ಲಗ್ಷುರಿ ವಲಯದ ಗ್ರಾಹಕರೂ ಅದನ್ನು ಬಯಸುತ್ತಾರೆ. ನೀವು ಮಾರಬೇಕಾದ ಮಾಡುವ ಉತ್ಪನ್ನಗಳು ವ್ಯಕ್ತಿಯ ಇಚ್ಛೆಯನ್ನು ಆಧರಿಸಿ ಇರುತ್ತವೆ. ವ್ಯಕ್ತಿಯನ್ನು ಅವು ಆಕರ್ಷಿಸಬೇಕು, ಸಂತೋಷ ನೀಡಬೇಕು.
ಉದ್ಯಮದ ಅವಲೋಕನಉದ್ಯಮ ವಲಯವು ಈಗ ಅತ್ಯಂತ ಸ್ಪರ್ಧಾತ್ಮಕವಾಗಿದೆ. ವಿದ್ಯಾರ್ಥಿಗಳು ಮೊದಲ ಉದ್ಯೋಗವೇ ಕೊನೆತನಕವೂ ಎಂದು ಭಾವಿಸುತ್ತಾರೆ. ಈ ಭಾವನೆ ಬೇಡ. ಉದ್ಯಮದಲ್ಲಿ ಮತ್ತಷ್ಟು ಬದಲಾವಣೆಗೆ ತೆರೆದುಕೊಳ್ಳಬೇಕು.
ನಿಮ್ಮನ್ನು ಚೈತನ್ಯದ ಚಿಲುಮೆಯಾಗಿ ಉತ್ತೇಜಿಸಬಲ್ಲ ಅವಕಾಶಗಳನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ನೀವು ಬಯಸಿದ ನಿರ್ದಿಷ್ಟ ಕ್ಷೇತ್ರದಲ್ಲೇ ಇರಿ. ನಿಮ್ಮ ಆರಂಭ ಒಳ್ಳೆಯದಾಗಿರಲಿ. ನೀವು ಉತ್ತಮ ಮತ್ತು ಜನಪ್ರಿಯ ಲಗ್ಷುರಿ ಉತ್ಪನ್ನ ಕಂಪೆನಿ ಆರಿಸಿಕೊಳ್ಳುವುದು ನಿಮ್ಮ ಕೆಲಸವನ್ನು ಸರಾಗ ಮಾಡುತ್ತದೆ.
ನನ್ನ ಪ್ರಕಾರ ಲಕ್ಸುರಿ ಬ್ರಾಂಡ್‌ಗಳ ಮ್ಯೋನೇಜರ್‌ಗೆ ಗ್ರಾಹಕರ ಅಭಿರುಚಿಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಬೇಕು. ಕೆವೈಪಿ- ಕೆವೈಸಿ (ನೋ ಯುವರ್ ಪ್ರಾಡಕ್ಟ್ ಮತ್ತು ನಿಮ್ಮ ಕಂಪನಿ ಬಗ್ಗೆ ತಿಳಿಯಿರಿ) ಅವರ ಮಂತ್ರವಾಗಬೇಕು. ಲಕ್ಸುರಿ ಬ್ರಾಂಡ್ ಮ್ಯೋನೇಜರ್‌ನ ಕನಿಷ್ಠ ವಿದ್ಯಾರ್ಹತೆ ಪದವಿ ಆಗಿರಬೇಕು.
ವಿಶೇಷ ವಿದ್ಯಾಭ್ಯಾಸ ಇದ್ದರೆ ಒಳಿತು. 2-3 ವರ್ಷಗಳ ಅನುಭವ ಇದ್ದರೆ ಇನ್ನೂ ಒಳಿತು. ವ್ಯವಸ್ಥಾಪಕರ ಮಟ್ಟದಲ್ಲಿ ಬ್ರಾಂಡ್ ಮ್ಯೋನೇಜರ್, ಸಿಆರ್‌ಎಂ, ಪಿಆರ್ ಇತ್ಯಾದಿ ವಿವಿಧ ವರ್ಗಗಳು ಇರುತ್ತವೆ.
ಜನರೊಡನೆ ಸ್ನೇಹದಿಂದ ಆತ್ಮೀಯವಾಗಿ ಬೆರೆಯಬೇಕು. ಅನುಭವದಿಂದ ಹಿರಿಯ ಮ್ಯೋನೇಜರ್ ಆಗಬಹುದು. ಗ್ರಾಹಕರ ಮನಸ್ಥಿತಿಯನ್ನು ಅರಿತುಕೊಳ್ಳುವುದು ಇಲ್ಲಿ ಅತ್ಯಂತ ಮಖ್ಯವಾಗುತ್ತದೆ. ನಿಮ್ಮ ಉತ್ಪನ್ನದ ಬಗ್ಗೆ ಅವರಲ್ಲಿ ಅಭಿರುಚಿ ಮೂಡಿಸುವುದು ಮುಖ್ಯ.
ಐಷಾರಾಮಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಹೇರಳ ಉದ್ಯೋಗಾವಕಾಶ ಇದೆ.
ಹೊಸಬರಿಗೆ ಇಲ್ಲಿ ತುಸು ಕಷ್ಟಕರವಾಗಬಹುದು. ಆರಂಭಿಕ ವರ್ಷಗಳಲ್ಲಿ ಅನುಭವ ಪಡೆದುಕೊಳ್ಳಬೇಕಾಗುತ್ತದೆ. ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ವಾಸ್ತವಿಕವಾಗಿ ಹೇಳುವುದಾದರೆ ಕಂಪನಿಯಿಂದ ಕಂಪನಿಗೆ ವೇತನ ಭಿನ್ನವಾಗಿರಬಹುದು. ಆದರೆ ಈ ವಲಯದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳೂ ಇವೆ. ಯಾವುದೇ ಉದ್ಯೋಗ ಪರಿಪೂರ್ಣವಾಗಿರುವುದಿಲ್ಲ, ಎಲ್ಲವೂ ನಿಮ್ಮ ಮನಸ್ಸಿಗೆ ತಕ್ಕಂತೆ ಇರುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು. ಸಮಯ ಮತ್ತು ಸಂದರ್ಭ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಮುಂದುವರಿಯಬೇಕು. ಈ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ನೀವೇ ತೆಗೆದುಕೊಳ್ಳಬೇಕು.
,ಲೇಖಕರು: ಪೋದ್ದಾರ ಡೈಮಂಡ್ಸ್‌ನ ಬ್ರಾಂಡ್ ಮ್ಯೋನೇಜರ್. ಐಐಜೆಟಿ ಆಯೋಜಿಸಿದ್ದ ಇಂಡಿಯಾ ಮೆಂಟರ್ಸ್ ಇಂಡಿಯಾ ಕರಿಯರ್ ಕುರಿತ ವಿಚಾರ ಸಂಕಿರಣದಲ್ಲಿ ನೀಡಿದ ಉಪನ್ಯಾಸದ ಆಯ್ದ ಭಾಗ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.