ಕ್ಯಾಂಪಸ್
ಬೆಂಗಳೂರಿನ ದಾಸರಹಳ್ಳಿಯಲ್ಲಿ ಕೇಂದ್ರ ಹೊಂದಿರುವ ಸಕ್ಷಮ್ ಟ್ರೈನಿಂಗ್ ಇಂಡಿಯಾ ಇದೀಗ ಸೌಲಭ್ಯ ನಿರ್ವಹಣೆ ಕ್ಷೇತ್ರದಲ್ಲಿ (ಫೆಸಿಲಿಟಿ ಮ್ಯಾನೇಜ್‌ಮೆಂಟ್) ವಿವಿಧ ಕೋರ್ಸ್‌ಗಳನ್ನು ಆರಂಭಿಸಿದ್ದು, ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದೆ.
ದೇಶದ ಆರ್ಥಿಕತೆ ಬೆಳವಣಿಗೆ ಕಾಣುತ್ತಿರುವಂತೆಯೇ ರಿಯಲ್ ಎಸ್ಟೇಟ್, ಚಿಲ್ಲರೆ, ಆತಿಥ್ಯ, ಮೂಲಸೌಕರ್ಯ ಮತ್ತು ವಾಣಿಜ್ಯ ಉದ್ದೇಶದ ಭೂಮಿ ಮತ್ತಿತರ ಕ್ಷೇತ್ರಗಳು ಕ್ಷಿಪ್ರ ಪ್ರಗತಿ ಹೊಂದುತ್ತಿವೆ. ಇಲ್ಲಿ ಸ್ಥಳ ಮತ್ತು ಉಪಕರಣಗಳ ಸಮರ್ಪಕ ನಿರ್ವಹಣೆ ಅತಿಮುಖ್ಯ.
ಇದರಿಂದ ಇಂಧನ ಉಳಿತಾಯ ಮತ್ತು ಅಚ್ಚುಕಟ್ಟುತನದಿಂದ ಉದ್ಯಮ ಮುನ್ನಡೆಸುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸೌಲಭ್ಯ ನಿರ್ವಹಣಾ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆಯಿದೆ.
ಕನಿಷ್ಠ ಶಿಕ್ಷಣ ಅರ್ಹತೆ (7ನೇ ತರಗತಿ ತೇರ್ಗಡೆಯಿಂದ ಆರಂಭ) ಅಥವಾ ಮೂಲ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ: http://sakshamtraining.in ಅಥವಾ 80-2362 8028 ಸಂಪರ್ಕಿಸಬಹುದು.
ಡಿಎಸ್‌ಕೆ ಅನಿಮೇಷನ್ ಶಿಕ್ಷಣ
ಅನಿಮೇಷನ್, ಇಂಡಸ್ಟ್ರಿಯಲ್ ಡಿಸೈನ್, ವಿಡಿಯೊ ಗೇಮಿಂಗ್ ಈಗ ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಬಹಳ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಈ ವಿಭಾಗದಲ್ಲಿ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ, ಇದನ್ನು ಕಲಿತವರಿಗೆ ಬೇಡಿಕೆ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ ಡಿಎಸ್‌ಕೆ ಸೂಪಿನ್ಫೋಕಾಮ್ ಪುಣೆಯಲ್ಲಿ ಫ್ರಾನ್ಸ್‌ನ ಗ್ರಾಂಡ್ ಹೆನಟ್ ಸಹಯೋಗದಲ್ಲಿ ಅತ್ಯಾಧುನಿಕ ಮತ್ತು ಅಂತರ‌್ರಾಷ್ಟ್ರೀಯ ದರ್ಜೆಯ ಶಿಕ್ಷಣ ಕೇಂದ್ರ ತೆರೆದಿದ್ದು, ಅನಿಮೇಷನ್, ಇಂಡಸ್ಟ್ರಿಯಲ್ ಡಿಸೈನ್ ಮತ್ತು ವಿಡಿಯೊ ಗೇಮಿಂಗ್‌ನಲ್ಲಿ ಐದು ವರ್ಷದ ಸಮಗ್ರ ಶಿಕ್ಷಣ ನೀಡುತ್ತಿದೆ. ಬೋಧಕ ಸಿಬ್ಬಂದಿಯಲ್ಲಿ ಹೆಚ್ಚಿನವರು ಯುರೋಪ್ ಮತ್ತು ಫ್ರಾನ್ಸ್‌ನಲ್ಲಿ ಹೆಸರಾದವರು.
20 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ತಲೆಯೆತ್ತಿದ ಈ ಸಂಸ್ಥೆಯಿಂದ ಈ ಸಲ ಮೊದಲ ತಂಡ ಹೊರ ಬಿದ್ದಿದೆ. ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೂ ದೇಶ, ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಇಲ್ಲಿ ಓದಿದವರು ಕೆಲಸಕ್ಕೆ ಸೇರುವುದಕ್ಕಿಂತ ಹೆಚ್ಚಾಗಿ ಸ್ವಂತ ಉದ್ಯಮಿಯಾಗಲು ಪ್ರೇರಣೆ ನೀಡುವುದು ವಿಶೇಷ.
ಇಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಸೇರಿದಂತೆ ದೇಶದ 5 ಕಡೆ ಏಪ್ರಿಲ್ 10 ಮತ್ತು ಮೇ 13ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಮಾಹಿತಿಗೆ: 90960 00003.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.