ADVERTISEMENT

ರ‍್ಯಾಂಕಿಂಗ್ ಅಕ್ರಮ ಆರೋಪ ಒಪ್ಪಿಕೊಂಡ ಎಐಟಿಎ

ಪಿಟಿಐ
Published 9 ಸೆಪ್ಟೆಂಬರ್ 2019, 20:22 IST
Last Updated 9 ಸೆಪ್ಟೆಂಬರ್ 2019, 20:22 IST

ನವದೆಹಲಿ: ರ‍್ಯಾಂಕಿಂಗ್‌ ಪಟ್ಟಿಯನ್ನು ಸೂಕ್ತ ಸಮಯದಲ್ಲಿ ಅಪ್‌ಡೇಟ್ ಮಾಡಲು ತಡವಾಗಿರುವುದು ನಿಜ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಒಪ್ಪಿಕೊಂಡಿದೆ. ತಮಗೆ ಬೇಕಾದ ಆಟಗಾರರಿಗೆ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ನೀಡುವುದಕ್ಕೆ ಎಐಟಿಎ ಮುಂದಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ, ಅರ್ಹತೆ ಇದ್ದರೂ ಮಗಳಿಗೆ ಅಗ್ರ ಸ್ಥಾನ ನೀಡಲು ತಡ ಮಾಡಲಾಗಿದೆ ಎಂದು 14 ವರ್ಷದ ಆಟಗಾರ್ತಿಯ ತಂದೆ ಈಚೆಗೆ ದೂರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ ‘ರ‍್ಯಾಂಕಿಂಗ್‌ ಪಟ್ಟಿಯನ್ನು ಅಪ್‌ಡೇಟ್ ಮಾಡುವಲ್ಲಿ ತಡವಾಗಿದೆ. ಇದಕ್ಕೆ ಯಾರು ಹೊಣೆ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಸೂಚಿಸಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT