ADVERTISEMENT

ಕ್ರೀಡಾ ಶಾಲೆ ಜೊತೆ ಬೋಪಣ್ಣ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:35 IST
Last Updated 19 ಡಿಸೆಂಬರ್ 2018, 19:35 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ (ಎಡದಿಂದ) ಜೈನ್‌ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಯು.ವಿ.ಶಂಕರ್‌, ಜೈನ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಚೆನ್‌ರಾಜ್‌ ರಾಯ್‌ಚಂದ್‌ ಮತ್ತು ರೋಹನ್‌ ಬೋಪಣ್ಣ ಹಸ್ತಲಾಘವ ಮಾಡಿದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ಭಾರತದ ಹಿರಿಯ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ ಅವರು ಜೈನ್‌ ಸಮೂಹ ಆರಂಭಿಸಲು ಉದ್ದೇಶಿಸಿರುವ ‘ದಿ ಸ್ಪೋರ್ಟ್ಸ್‌ ಸ್ಕೂಲ್‌’ ಜೊತೆ ಒ‍ಪ್ಪಂದ ಮಾಡಿಕೊಂಡಿದ್ದಾರೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೈನ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಚೆನ್‌ರಾಜ್‌ ರಾಯ್‌ಚಂದ್‌ ಮತ್ತು ಬೋಪಣ್ಣ ಅವರು ಒಪ್ಪಂದಕ್ಕೆ ಸಹಿ ಮಾಡಿದರು.

ಒಪ್ಪಂದದ ‍ಪ್ರಕಾರ ಬೋಪಣ್ಣ ಟೆನಿಸ್‌ ಅಕಾಡೆಮಿಯ ಕೋಚ್‌ಗಳು ಸ್ಪೋರ್ಟ್ಸ್‌ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ADVERTISEMENT

ಕನಕಪುರ ರಸ್ತೆ ಬಳಿ ಇರುವ 15 ಎಕರೆ ಜಾಗದಲ್ಲಿ ₹200 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್‌ ಸ್ಕೂಲ್‌ ನಿರ್ಮಿಸಲು ಜೈನ್‌ ಸಮೂಹ ನಿರ್ಧರಿಸಿದೆ. ಈ ಶಾಲೆಯಲ್ಲಿ ಟೆನಿಸ್‌ ಜೊತೆಗೆ ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಕ್ರಿಕೆಟ್‌ ಮತ್ತು ಈಜು ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ಶಾಲೆ 2020ರಲ್ಲಿ ಕಾರ್ಯಾರಂಭ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.