ದಾಲಿಬೋರ್ ಸ್ವರ್ಸಿನಾ
–ಎಕ್ಸ್ ಚಿತ್ರ
ಪುಣೆ: ಝೆಕ್ ರಿಪಬ್ಲಿಕ್‌ನ ದಾಲಿಬೋರ್ ಸ್ವರ್ಸಿನಾ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ಮಹಾ ಓಪನ್ ಎಟಿಪಿ ಚಾಲೆಂಜರ್ಸ್ 100 ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಕಿರೀಟವನ್ನು
ಮುಡಿಗೇರಿಸಿಕೊಂಡರು.
ಫೈನಲ್ ಹಣಾಹಣಿಯಲ್ಲಿ 21 ವರ್ಷ ವಯಸ್ಸಿನ ದಾಲಿಬೋರ್ 7-6 (3), 6-1ರಿಂದ ಬ್ರಾಂಡನ್ ಹಾಲ್ಟ್ ಅವರನ್ನು ಮಣಿಸಿದರು. ದಾಲಿಬೋರ್ ಅವರಿಗೆ ಮೊದಲ ಸೆಟ್‌ನಲ್ಲಿ ಅಮೆರಿಕದ ಆಟಗಾರನಿಂದ ಪ್ರಬಲ ಪೈಪೋಟಿ ಎದುರಾಯಿತು.
ಆರಂಭಿಕ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ವಶಪಡಿಸಿಕೊಂಡ ಅವರು, ಎರಡನೇ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು.
ಈ ಗೆಲುವಿನೊಂದಿಗೆ ದಾಲಿಬೋರ್ ಅವರು ₹19.69 ಲಕ್ಷ ಬಹುಮಾನ ಮತ್ತು 100 ಎಟಿಪಿ ರ‍್ಯಾಂಕಿಂಗ್ ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ಹಾಲ್ಟ್ ಅವರು ₹11.56 ಲಕ್ಷ ಮತ್ತು 60 ಎಟಿಪಿ ಪಾಯಿಂಟ್ಸ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.