ಬೆಂಗಳೂರು: ಅಗ್ರಶ್ರೇಯಾಂಕದ ಸಂಸ್ಕೃತಿ ಲಾಲ್ ಅವರಿಗೆ ಸೋಲುಣಿಸಿದ ಗುರ್ಲೀನ್ ಕೌರ್ ಖನುಜಾ, ಕೆಎಸ್ಎಲ್ಟಿಎ–ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಕಾಲಿಟ್ಟರು.
ಇಲ್ಲಿನ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ಸಿಂಗಲ್ಸ್ನಲ್ಲಿ ಬುಧವಾರ, 12 ವರ್ಷದ ಗುರ್ಲೀನ್ 6-4, 7-6 (2)ರಿಂದ ಸಂಸ್ಕೃತಿ ಅವರನ್ನು ಮಣಿಸಿದರು. ಗುರ್ಲೀನ್ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದಾರೆ.
ಬಾಲಕಿಯರ ವಿಭಾಗದ ಇನ್ನುಳಿದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ದಿಶಾ ಕುಮಾರ್ 6-3, 6-3ರಿಂದ ಇಂದುಶಾ ನಿಮಕಾಯಲ ಎದುರು, ಅವ್ವಲ್ ವಿವೇಕಾನಂದನ್ 5-7, 6-4, 6-0ರಿಂದ ಪೂಜಾ ನಾಗರಾಜ್ ವಿರುದ್ಧ, ಅರ್ಜಾನ್ ಕೊರಾಕಿವಾಲಾ 6-2, 6-0ರಿಂದ ಆದ್ಯಾ ಚೌರಾಸಿಯಾ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.
ಬಾಲಕರ ಸಿಂಗಲ್ಸ್ ಎಂಟರಘಟ್ಟದ ಹಣಾಹಣಿಗಳಲ್ಲಿ ಅಭ್ರದೀಪ್ ಭಟ್ಟಾಚಾರ್ಯ 6-7 (6), 6-4, 6-2ರಿಂದ ಆದಿತ್ಯ ನಾರಾಯಣನ್ ಎದುರು, ಅರಿಹಂತ್ ಕೌಲ್ 6-1, 6-3ರಿಂದ ಆಹಿಲ್ ಆಯಾಜ್ ವಿರುದ್ಧ, ಯಶ್ ಪಂಚಾಕ್ಷರಿ 1-6, 6-4, 6-1ರಿಂದ ಕ್ರಿಸ್ಟೊ ಬಾಬು ವಿರುದ್ಧ ಮತ್ತು ದಕ್ಷಿಶ್ ಆರ್ಯನ್ ಬಸವರಾಜು 6-2, 7-5ರಿಂದ ಅನಂತ್ ಕೃಷ್ಣನ್ ಅವರನ್ನು ಮಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.