ADVERTISEMENT

ಅಮೆರಿಕ ಓಪನ್: ಮುಖ್ಯ ಸುತ್ತು ಪ್ರವೇಶಕ್ಕೆ ಪ್ರಜ್ಞೇಶ್‌ ವಿಫಲ

ಪಿಟಿಐ
Published 27 ಆಗಸ್ಟ್ 2021, 13:46 IST
Last Updated 27 ಆಗಸ್ಟ್ 2021, 13:46 IST
ಪ್ರಜ್ಞೇಶ್ ಗುಣೇಶ್ವರನ್ –ಪಿಟಿಐ ಚಿತ್ರ
ಪ್ರಜ್ಞೇಶ್ ಗುಣೇಶ್ವರನ್ –ಪಿಟಿಐ ಚಿತ್ರ   

ನ್ಯೂಯಾರ್ಕ್‌: ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸುವ ಆಸೆ ಈಡೇರದೇ ವಾಪಸಾದರು. ಗುರುವಾರ ರಾತ್ರಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕ ಕ್ರಿಸ್ಟೋಫರ್ ಯೂಬ್ಯಾಂಕ್ಸ್ ಎದುರು ಸೋತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 156ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಎರಡನೇ ಸುತ್ತಿನ ಹಣಾಹಣಿಯಲ್ಲಿ 216ನೇ ರ‍್ಯಾಂಕ್‌ನ ಕ್ರಿಸ್ಟೋಫರ್‌ಗೆ 3-6, 4-6ರಲ್ಲಿ ಮಣಿದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು. ಪಂದ್ಯ 50 ನಿಮಿಷದಲ್ಲಿ ಮುಕ್ತಾಯಗೊಂಡಿತು.

31 ವರ್ಷದ ಪ್ರಜ್ಞೇಶ್ 2019ರಲ್ಲಿ ಅಮೆರಿಕ ಓಪನ್ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸಿದ್ದರು. ಆದರೆ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್‌ ವಿರುದ್ಧ ಸೋತಿದ್ದರು. ಸುಮಿತ್ ನಗಾಲ್ ಮತ್ತು ರಾಮಕುಮಾರ್ ರಾಮನಾಥನ್ ಈ ಬಾರಿಯ ಅರ್ಹತಾ ಸುತ್ತಿನ ಮೊದಲ ಪಂದ್ಯಗಳಲ್ಲೇ ಸೋತು ಹೊರಬಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.