ADVERTISEMENT

ಟೆನಿಸ್‌: ಫೈನಲ್‌ಗೆ ಪ್ರಜ್ಞೇಶ್‌

ಪಿಟಿಐ
Published 20 ಅಕ್ಟೋಬರ್ 2018, 20:07 IST
Last Updated 20 ಅಕ್ಟೋಬರ್ 2018, 20:07 IST

ನವದೆಹಲಿ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಚೀನಾದಲ್ಲಿ ನಡೆಯುತ್ತಿರುವ ನಿಂಗ್ಬೊ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಜ್ಞೇಶ್‌ 6–2, 6–2ರಲ್ಲಿ ಸರ್ಬಿಯಾದ ಐದನೇ ಶ್ರೇಯಾಂಕದ ಆಟಗಾರ ಮಿಯೊಮಿರ್‌ ಕೆಚ್ಮಾನೊವಿಚ್‌ ಅವರನ್ನು ಸೋಲಿಸಿದರು.

ಫೈನಲ್‌ನಲ್ಲಿ ಗುಣೇಶ್ವರನ್‌, ಇಟಲಿಯ ಮೂರನೇ ಶ್ರೇಯಾಂಕದ ಆಟಗಾರ ಥಾಮಸ್‌ ಫಾಬಿಯಾನೊ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ದಿವಿಜ್‌ ಜೋಡಿಗೆ ನಿರಾಸೆ: ಆ್ಯಂಟ್‌ವರ್ಪ್‌ನಲ್ಲಿ ನಡೆದ ಯೂರೋಪಿಯನ್‌ ಓಪನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ದಿವಿಜ್‌ ಶರಣ್‌ ಮತ್ತು ಆರ್ಟೆಮ್‌ ಸಿಟಾಕ್‌ ಜೋಡಿ ನಿರಾಸೆ ಕಂಡಿತು.

ಸೆಮಿಫೈನಲ್‌ನಲ್ಲಿ ದಿವಿಜ್‌ ಮತ್ತು ಸಿಟಾಕ್‌ 5–7, 6–7ರಲ್ಲಿ ನಿಕೊಲಸ್‌ ಮಹುತ್‌ ಮತ್ತು ಎಡ್ವರ್ಡೊ ರೋಜರ್‌ ವಸೆಲಿನ್‌ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.