ADVERTISEMENT

ಟೆನಿಸ್: ರಾಮಕುಮಾರ್‌ಗೆ ಸಿಂಗಲ್ಸ್ ಪ್ರಶಸ್ತಿ

ಪಿಟಿಐ
Published 28 ನವೆಂಬರ್ 2021, 18:07 IST
Last Updated 28 ನವೆಂಬರ್ 2021, 18:07 IST
ರಾಮಕುಮಾರ್ ರಾಮನಾಥನ್
ರಾಮಕುಮಾರ್ ರಾಮನಾಥನ್   

ಮನಾಮ, ಬಹರೇನ್: ಭಾರತದ ರಾಮಕುಮಾರ್ ರಾಮನಾಥನ್ ಅವರು ಚಾಲೆಂಜರ್ಸ್ ಹಂತದ ಟೆನಿಸ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದರು.

ಮನಾಮದಲ್ಲಿ ಭಾನುವಾರ ನಡೆದ ಎಟಿಪಿ80 ಚಾಲೆಂಜರ್ಸ್‌ ಫೈನಲ್‌ನಲ್ಲಿ 6–1, 6–4ರಿಂದ ರಷ್ಯಾದ ಇವಾಗ್ನಿ ಕಾರ್ಲೊವಸ್ಕಿ ವಿರುದ್ಧ ಜಯಿಸಿದರು. 27 ವರ್ಷದ ರಾಮಕುಮಾರ್ ಈ ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ಆಟಗಾರನಾಗಿ ಕಣಕ್ಕಿಳಿದಿದ್ದರು. ವಿಶ್ವ ಶ್ರೇಯಾಂಕದಲ್ಲಿ 222ನೇ ಸ್ಥಾನದಲ್ಲಿದ್ದಾರೆ.

ವೃತ್ತಿಪರ ಟೆನಿಸ್‌ಗೆ ಕಾಲಿಟ್ಟು 12 ವರ್ಷಗಳ ನಂತರ ಅವರು ಈ ಸಾಧನೆ ಮಾಡಿದ್ದಾರೆ. ಈ ಜಯದೊಂದಿಗೆ 80 ರ‍್ಯಾಂಕಿಂಗ್ ಅಂಕಗಳನ್ನು ಪಡೆದ ಅವರು 200 ರ‍್ಯಾಂಕ್‌ನೊಳಗೆ ಸ್ಥಾನ ಪಡೆದರು. ಇದರೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ಅಗ್ರ ರ‍್ಯಾಂಕ್‌ ‍ಪಡೆದ ಭಾರತದ ಆಟಗಾರನಾಗಿದ್ದಾರೆ. ಅವರ ನಂತರದ ಸ್ಥಾನಗಳಲ್ಲಿ ಪ್ರಜ್ಞೇಶ್ ಗುಣೇಶ್ವರನ್ (215) ಮತ್ತು ಸುಮಿತ್ ನಗಾಲ್ (219) ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.