ADVERTISEMENT

ಚಾಂಪಿಯನ್‌ಷಿಪ್‌: ಸೆಹಜ್‌ಗೆ ವೇದಾಂಶ್ ಎದುರಾಳಿ

ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 14:11 IST
Last Updated 19 ನವೆಂಬರ್ 2021, 14:11 IST
ವೇದಾಂಶ್ ಆಟದ ವೈಖರಿ
ವೇದಾಂಶ್ ಆಟದ ವೈಖರಿ   

ಬೆಂಗಳೂರು: ಸೆಹಜ್ ಸಿಂಗ್ ಪವಾರ್ ಹಾಗೂ ವೇದಾಂಶ್ ರೆಡ್ಡಿಯರ್‌ ಅವರು ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.

ಫಾರ್ಚುನ್ ಸ್ಪೋರ್ಟ್ಸ್ ಅಕಾಡೆಮಿ ಅಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಶುಕ್ರವಾರ ಸೆಹಜ್‌ 7–3ರಿಂದ ಚರಣ್ ವರ್ಧಮ್ ಅವರ ಸವಾಲು ಮೀರಿದರೆ, ವೇದಾಂಶ್‌ 7–1ರಿಂದ ಅಕ್ಷಯ್ ಪ್ರಸಾದ್ ಅವರನ್ನು ಮಣಿಸಿದರು.

ಬಾಲಕಿಯರ ವಿಭಾಗದಲ್ಲಿ ಚಾರ್ಮಿ ಗೋಪಿನಾಥ್ ಹಾಗೂ ವನ್ಯಾ ಶ್ರೀವಾತ್ಸವ್ ಫೈನಲ್‌ನಲ್ಲಿ ಸೆಣಸಲಿದ್ದಾರೆ.

ADVERTISEMENT

ನಾಲ್ಕರ ಘಟ್ಟದ ಪಂದ್ಯದಲ್ಲಿ ಚಾರ್ಮಿ 7–1ರಿಂದ ಕಶೀಶ್ ಕಾಂತ್ ಎದುರು ಗೆದ್ದರೆ, ವನ್ಯಾ 7–3ರಿಂದ ಅನುಷ್ಕಾ ಪಾವನಿ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.