
ಧಾರವಾಡ: ಬೆಂಗಳೂರಿನ ಗೌರವ್ ಗೌಡ ಮತ್ತು ಹಿಯಾ ಸಿಂಗ್ ಅವರು ಶನಿವಾರ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.
ಕಾಸ್ಮೋಸ್ ಕ್ಲಬ್ ಆಯೋಜಿಸಿರುವ ಟೂರ್ನಿಯಲ್ಲಿ ಗೌರವ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 14-12, 11-4, 7-11, 8-11, 11-8ರಿಂದ ಆರ್ಯ ಎ.ಜೈನ್ ಅವರನ್ನು ಸೋಲಿಸಿದರು.
ಸೆಮಿಫೈನಲ್‌ನಲ್ಲಿ ಗೌರವ್ 9-11, 11-8, 11-5, 8-11, 11-8ರಿಂದ ತಮೋಘ್ನ ವಿರುದ್ಧ; ಆರ್ಯ 9-11, 16-14, 11-6, 11-8ರಿಂದ ವೇದಾಂತ್ ವಸಿಷ್ಠ ವಿರುದ್ಧ ಗೆಲುವು ಸಾಧಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಹಿಯಾ ಸಿಂಗ್ 11-7, 8-11, 11-4, 11-7ರಿಂದ ಐರಿನ್ ಸುಭಾಷ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಹಿಯಾ 11-3, 11-3, 11-2ರಿಂದ ದೀಕ್ಷಿತಾ ಪಿ.ನಾಯಕ್ ಎದುರು; ಐರಿನ್ 11-9, 11-4, 4-11, 11-8ರಿಂದ ಸುಮೇದಾ ಕೆ.ಎಸ್.ಭಟ್ ಎದುರು ಜಯ ಗಳಿಸಿದ್ದರು.
ರಾಶಿಗೆ ಪ್ರಶಸ್ತಿ: ಬೆಂಗಳೂರಿನ ರಾಶಿ ವಿ.ರಾವ್ ಅವರು 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು. ರಾಶಿ ಫೈನಲ್ ನಲ್ಲಿ 11-5, 8-11, 11-9, 16-14, 11-13, 11-8ರಿಂದ ಶಿವಾನಿ ಮಹೇಂದ್ರನ್ ಅವರನ್ನು ಸೋಲಿಸಿದರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ರಾಶಿ 11-2, 11-7, 11-9ರಿಂದ ಐರಿನ್ ಸುಭಾಷ್ ಅವರನ್ನು; ಶಿವಾನಿ 23-21, 11-7, 9-11, 12-10ರಿಂದ ಸುಮೇದಾ ಕೆ.ಎಸ್. ಭಟ್ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.