ADVERTISEMENT

ಸ್ವಿಟೋಲಿನಾ–ಮೊಂಫಿಲ್ಸ್‌ ಪ್ರಣಯದಾಟ

ಏಜೆನ್ಸೀಸ್
Published 17 ಜನವರಿ 2019, 15:43 IST
Last Updated 17 ಜನವರಿ 2019, 15:43 IST
ಎಲಿನಾ ಸ್ವಿಟೋಲಿನಾ
ಎಲಿನಾ ಸ್ವಿಟೋಲಿನಾ   

ಮೆಲ್ಬರ್ನ್‌: ಉಕ್ರೇನ್‌ನ ಟೆನಿಸ್‌ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಮತ್ತು ಫ್ರಾನ್ಸ್‌ನ ಗಾಯೆಲ್‌ ಮೊಂಫಿಲ್ಸ್‌ ನಡುವಣ ಪ್ರೇಮ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆರನೇ ಶ್ರೇಯಾಂಕದ ಆಟಗಾರ್ತಿ ಎಲಿನಾ ಗುರುವಾರ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ 6–4, 6–1ರಿಂದ ವಿಕ್ಟೋರಿಯಾ ಕುಜುಮೋವಾ ಎದುರು ಗೆದ್ದರು. ಈ ಹಣಾಹಣಿಯನ್ನು ಮೊಂಫಿಲ್ಸ್‌ ‘ಆಟಗಾರರ ಬಾಕ್ಸ್‌’ನಲ್ಲಿ ಕುಳಿತು ವೀಕ್ಷಿಸಿದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಲಿನಾ ‘ನಾನು ಮೊಂಫಿಲ್ಸ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದೇನೆ’ ಎಂದು ಒಪ್ಪಿಕೊಂಡರು.

ADVERTISEMENT

‘ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಾನು ಪಂದ್ಯ ಆಡುವಾಗ ಆತ ಬಂದು ಬೆಂಬಲಿಸುತ್ತಾನೆ. ಆತನ ಪಂದ್ಯ ಇರುವಾಗ ನಾನು ಕ್ರೀಡಾಂಗಣಕ್ಕೆ ಹೋಗಿ ಪ್ರೋತ್ಸಾಹಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.