ಬೆಂಗಳೂರು: ಕರ್ನಾಟಕದ ಟೇಬಲ್ ಟೆನಿಸ್ ಆಟಗಾರ ಅಥರ್ವ ಅವರು ನೇಪಾಳದಲ್ಲಿ ನಡೆದ ದಕ್ಷಿಣ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದಾರೆ.
ತಂಡ ವಿಭಾಗ, ಮಿಶ್ರ ಡಬಲ್ಸ್, ಬಾಲಕರ ಡಬಲ್ಸ್‌ನಲ್ಲಿ ಅಥರ್ವ ಚಿನ್ನ ಗೆದ್ದರೆ, ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದರು.15 ವರ್ಷದೊಳಗಿನ ಭಾರತ ತಂಡವನ್ನು ಅಥರ್ವ ಮುನ್ನಡೆಸಿದ್ದರು. ಫೈನಲ್‌ನಲ್ಲಿ ಭಾರತ 3–1ರಿಂದ ನೇಪಾಳ ತಂಡವನ್ನು ಮಣಿಸಿತು. ಮಿಶ್ರ ಡಬಲ್ಸ್‌ನಲ್ಲಿ ಅಥರ್ವ ಮತ್ತು ಪ್ರತೀತಿ ಪಾಲ್ 3–0 ಯಿಂದ ಪಾಕಿಸ್ತಾನ ಆಟಗಾರರನ್ನು ಸೋಲಿಸಿದರು. ಬಾಲಕರ ಡಬಲ್ಸ್‌ನಲ್ಲಿ ವಿಶ್ರುತ್ ರಾಮಕೃಷ್ಣನ್ ಅವರ ಜೊತೆಗೂಡಿ ಅಥರ್ವ 3–0 ಯಿಂದ ನೇಪಾಳದ ಆಟಗಾರರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.