ದೋಹಾ: ಉದಯೋನ್ಮುಖ ಆಟಗಾರ್ತಿಯರಾದ ಯಶಸ್ವಿನಿ ಘೋರ್ಪಡೆ ಮತ್ತು ದಿಯಾ ಚಿತಳೆ ಜೋಡಿಯ ನಿರ್ಗಮನದೊಂದಿಗೆ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮಹಿಳೆಯರ ಡಬಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕದ ಘೋರ್ಪಡೆ ಮತ್ತು ಚಿತಾಳೆ 0–3 (7–11, 8–11, 9–11)ಯಿಂದ ಜಪಾನಿನ ಮಿವಾ ಹರಿಮೊಟೊ ಮತ್ತು ಮಿಯು ಕಿಹರಾ ವಿರುದ್ಧ ಪರಾಭವಗೊಂಡದರು. ಭಾರತದ ಜೋಡಿಯು ಯಾವುದೇ ಹಂತದಲ್ಲೂ ಎದುರಾಳಿಗೆ ಸರಿಸಾಟಿಯಾಗಲಿಲ್ಲ.
ಸಿಂಗಲ್ಸ್ ತಾರೆಯರಾದ ಮಾನವ್ ಠಕ್ಕರ್, ಮಣಿಕಾ ಬಾತ್ರಾ ಸೇರಿದಂತೆ ಭಾರತದ ಇತರರು ಈ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.