ADVERTISEMENT

ಟೆನಿಸ್‌: ಗಾಯಗೊಂಡು ಹೊರನಡೆದ ಒಸಾಕ

ಏಜೆನ್ಸೀಸ್
Published 26 ಅಕ್ಟೋಬರ್ 2018, 18:23 IST
Last Updated 26 ಅಕ್ಟೋಬರ್ 2018, 18:23 IST
ನವೊಮಿ ಒಸಾಕ
ನವೊಮಿ ಒಸಾಕ   

ಸಿಂಗಪುರ: ಜಪಾನಿನ ನವೋಮಿ ಒಸಾಕ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಟೆನಿಸ್ ಫೈನಲ್ಸ್‌ ಟೂರ್ನಿಯಲ್ಲಿ ಗಾಯಗೊಂಡು ನಿರ್ಗಮಿಸಿದ್ದಾರೆ.

ಈ ಟೂರ್ನಿಯಲ್ಲಿ ಅವರು ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಆದರೆ ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ವಿಪರೀತ ಕಾಲುನೋವಿನಿಂದ ಬಳಲಿದರು. ಕಣ್ಣೀರಿಡುತ್ತ ನಿರ್ಗಮಿಸಿದರು.

47 ನಿಮಿಷಗಳವರೆಗೆ ನಡೆದ ಮೊದಲ ಸೆಟ್‌ನಲ್ಲಿ ಅವರು ಆಗಾಗ ವೈದ್ಯರಿಂದ ಚಿಕಿತ್ಸೆ ಪಡೆದು ಆಡಿದರು. ಶುಕ್ರವಾರ ನಡೆದ ಸೆಮಿ ಫೈನಲ್ಸ್‌ನಲ್ಲಿ ಒಸಾಕ, ಮೊದಲ ಸೆಟ್‌ನಲ್ಲಿಯೇ 3–6 ರಿಂದ ಹಾಲೆಂಡ್‌ನ ಕಿಕಿ ಬೆರ್ಟೆನ್ಸ್‌ ಎದುರು ಸೋಲೊಪ್ಪಿಕೊಂಡರು. 21 ವರ್ಷದ ನವೊಮಿ ಅವರು ಈಚೆಗೆ ಅಮೆರಿಕ ಓಪನ್ ಟೆನಿಸ್ ಪ್ರಶಸ್ತಿ ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.