ADVERTISEMENT

ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಗೊವಿನ್‌, ಆಮೋದಿನಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:58 IST
Last Updated 22 ಡಿಸೆಂಬರ್ 2018, 19:58 IST

ಬೆಂಗಳೂರು: ಗೊವಿನ್‌ ಸೆಹ್ವಾಗ್ ಮತ್ತು ಆಮೋದಿನಿ ನಾಯಕ್‌, ನಮ್ಮ ಸ್ಪೋರ್ಟ್ಸ್‌–ಎಟಿಎ 16 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ನರಾಗಿ ಹೊರಹೊಮ್ಮಿದರು.

ನಮ್ಮ ಸ್ಪೋರ್ಟ್ಸ್‌ ಅಕಾಡೆಮಿ ಅಂಗಳದಲ್ಲಿ ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಗೊವಿನ್‌ ಸೆಹ್ವಾಗ್‌ 6–3, 6–2ರಿಂದ ಸಾಯಿ ಅದಿತ್‌ ಅವರನ್ನು ಮಣಿಸಿದರು.

ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆಮೋದಿನಿ 6–3, 7–5ರಿಂದ ವಿದ್ಯುಲ್‌ ಮಣಿಕಾಂತಿ ಅವರನ್ನು ಸೋಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.