ADVERTISEMENT

ಬೆಂಗಳೂರು ದಕ್ಷಿಣ ಚಾಂಪಿಯನ್‌

ಎಸ್‌ಜಿಎಫ್‌ಐ ರಾಜ್ಯಮಟ್ಟದ 19 ವರ್ಷದೊಳಗಿನವರ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:26 IST
Last Updated 27 ನವೆಂಬರ್ 2019, 20:26 IST
ಚಾಂಪಿಯನ್‌ ಬೆಂಗಳೂರು ದಕ್ಷಿಣ ತಂಡ
ಚಾಂಪಿಯನ್‌ ಬೆಂಗಳೂರು ದಕ್ಷಿಣ ತಂಡ   

ಬೆಂಗಳೂರು: ಬೆಂಗಳೂರು ದಕ್ಷಿಣ ತಂಡವು ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಜಿಎಫ್‌ಐ) ರಾಜ್ಯಮಟ್ಟದ 19 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಬುಧವಾರ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಆವರಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡವು ಬೆಂಗಳೂರು ಉತ್ತರ ತಂಡವನ್ನು 2–0ಯಿಂದ ಮಣಿಸಿತು.

ವಿಜೇತ ತಂಡದ ನಿನಾದ್‌ ರವಿ ಸಿಂಗಲ್ಸ್ (ಬೆಸ್ಟ್ ಆಫ್‌ 9) ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದ ಕಮಲಾಕಣ್ಣನ್‌ ಎದುರು 6–2ರಿಂದ ಗೆದ್ದರು. ಬಳಿಕ ನಿನಾದ್‌ ಅವರು ಎ.ದೀಪಕ್‌ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಗೊವಿನ್‌ ಸೆಹವಾಗ್‌–ನಿತಿನ್‌ ಗೌಡ ಜೋಡಿಯನ್ನು 6–1ರಿಂದ ಸೋಲಿಸಿದರು.

ಎಸ್‌ಜಿಎಫ್‌ಐ ರಾಷ್ಟ್ರೀಯ ಟೂರ್ನಿಯು ಡಿಸೆಂಬರ್‌ 24ರಿಂದ ನವದೆಹಲಿಯಲ್ಲಿ ನಡೆಯಲಿದೆ.

ADVERTISEMENT

ನಿನಾದ್‌ ರವಿ, ಎ.ದೀಪಕ್‌, ಕಮಲಾಕಣ್ಣನ್‌, ಪ್ರೀತ್‌ ಸತ್ಯಮೂರ್ತಿ ಹಾಗೂ ಗೊವಿನ್‌ ಸೆಹವಾಗ್‌ ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.