ADVERTISEMENT

ಇ-ಜ್ಞಾನ ಡಾಟ್ ಕಾಮ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST
ಇ-ಜ್ಞಾನ ಡಾಟ್ ಕಾಮ್
ಇ-ಜ್ಞಾನ ಡಾಟ್ ಕಾಮ್   

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾಗಿರುವ ಕನ್ನಡದ ಜಾಲತಾಣ ‘ಇ-ಜ್ಞಾನ ಡಾಟ್ ಕಾಮ್’ ಸಿದ್ಧವಾಗಿದ್ದು, ಬೆಂಗಳೂರಿನ ಹವ್ಯಾಸಿ ಬರಹಗಾರ ಟಿ. ಜಿ.  ಶ್ರೀನಿಧಿ ಈ ತಾಣ  ಸಿದ್ಧಪಡಿಸಿದ್ದಾರೆ.

 ವಿಜ್ಞಾನ ವಿಷಯಗಳನ್ನು ಸುಲಭ ಭಾಷೆಯಲ್ಲಿ  ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆ ಇ-ಜ್ಞಾನ ತಾಣದ್ದು. 2007ರಿಂದಲೇ ಜಾಲಲೋಕದಲ್ಲಿ  ಸಕ್ರಿಯವಾಗಿರುವ ಇ-ಜ್ಞಾನ ತನ್ನ ಪ್ರಾಯೋಗಿಕ ಆವೃತ್ತಿಯಲ್ಲಿ ಇದುವರೆಗೆ ನೂರಕ್ಕೂ ಹೆಚ್ಚು ವೈವಿಧ್ಯಮಯ ಬರಹಗಳನ್ನು ಪ್ರಕಟಿಸಿದೆ; ಹನ್ನೆರಡು ಸಾವಿರಕ್ಕೂ ಹೆಚ್ಚಿನ ಪೇಜ್‌ವ್ಯೆಗಳನ್ನು ದಾಖಲಿಸಿದೆ. ಸುದ್ದಿ, ಲೇಖನಗಳು, ಅಂಕಣಗಳು, ಪುಸ್ತಕ ಪರಿಚಯ, ಕಿರಿಯರಿಗಾಗಿಯೇ ವಿಶೇಷ ಬರಹಗಳು... ಹೀಗೆ ಇ-ಜ್ಞಾನದಲ್ಲಿ  ಅನೇಕ ಬಗೆಯ ಮಾಹಿತಿ ಲಭ್ಯವಿದೆ.

ವಿಜ್ಞಾನ-ತಂತ್ರಜ್ಞಾನ ಕುರಿತ ಕನ್ನಡ ಜಾಲತಾಣಗಳ ಪಟ್ಟಿ ಹಾಗೂ ಮಾಹಿತಿ ತಂತ್ರಜ್ಞಾನದ ಬಗೆಗೆ ಕನ್ನಡದಲ್ಲಿ ಪ್ರಕಟವಾಗಿರುವ ಪುಸ್ತಕಗಳ ಪಟ್ಟಿಯ ತಯಾರಿಕೆಯಲ್ಲಿ ತೊಡಗಿಕೊಂಡಿರುವುದು ಇ-ಜ್ಞಾನದ ಇತ್ತೀಚಿನ ಚಟುವಟಿಕೆ.

ಇದೀಗ ತನ್ನದೇ ಆದ ಜಾಲತಾಣ ಹೊಂದಿ ಹೊಸರೂಪದಲ್ಲಿ ಅನಾವರಣಗೊಂಡಿರುವ ಈ ತಾಣ ತನ್ನ ಓದುಗರಿಗಾಗಿ ಇದೀಗ ಇನ್ನಷ್ಟು ವೈವಿಧ್ಯಮಯ ಮಾಹಿತಿ ಹೊತ್ತುತಂದಿದೆ. ತಾಣದ

ವಿಳಾಸ www.ejnana.com  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT