ಇಂಟರ್ನೆಟ್ ಮಾಹಿತಿ ಶೋಧದ ದೈತ್ಯ ತಾಣವಾಗಿರುವ ಗೂಗಲ್, ತನ್ನ ಪ್ರತಿಸ್ಪರ್ಧಿ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಮತ್ತು ಯಾಹೂಗಳ ಜತೆ ಕೈಜೋಡಿಸಿ ಅಂತರ್ಜಾಲ ತಾಣದ ಶೋಧ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ತರಲು ಮುಂದಾಗಿದೆ.
ಈ ಮೂರು ಸಂಸ್ಥೆಗಳು ಜತೆಯಾಗಿ ಹೊಸ ಮಾಹಿತಿ ಶೋಧ ತಾಣ `ಸ್ಕೀಮಾ ಡಾಟ್ ಆರ್ಗ್~ (Schema.org) ರೂಪಿಸಿವೆ. ಗೂಗಲ್, ಬಿಂಗ್ ಮತ್ತು ಯಾಹೂ ಜತೆಯಾಗಿ ಈ ತಾಣ ಅಭಿವೃದ್ಧಿಪಡಿಸಿವೆ.
ಅಂತರ್ಜಾಲ ತಾಣದ ಮಾಲೀಕರು ಮತ್ತು ಇಂತಹ ತಾಣಗಳನ್ನು ಅಭಿವೃದ್ಧಿಪಡಿಸುವವರು ಪ್ರಮುಖ ಮಾಹಿತಿ ಶೋಧ ತಾಣಗಳಲ್ಲಿ ತಮ್ಮ ತಾಣವು ಅನಾವರಣಗೊಳ್ಳುವುದರಲ್ಲಿ ಸಾಕಷ್ಟು ಸುಧಾರಣೆ ತರಲು ಇಲ್ಲಿ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಬಹುದು.
ಜಾಲ ತಾಣಗಳನ್ನು ಅಭಿವೃದ್ಧಿಪಡಿಸುವವರಿಗೆ ಈ `ಸ್ಕೀಮಾ ಡಾಟ್ ಆರ್ಗ್~ ಒಂದೆಡೆಯೇ ಎಲ್ಲ ಮಾಹಿತಿ - ಸೌಲಭ್ಯ ಒದಗಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.