ADVERTISEMENT

ಸ್ಮಾರ್ಟ್ ಫೋನೇ ಕಾರಿನ ಕೀಲಿ...

ಸತೀಶ ಬೆಳ್ಳಕ್ಕಿ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಸ್ಮಾರ್ಟ್ ಫೋನೇ ಕಾರಿನ ಕೀಲಿ...
ಸ್ಮಾರ್ಟ್ ಫೋನೇ ಕಾರಿನ ಕೀಲಿ...   

ಪದೇ ಪದೇ ನಿಮ್ಮ ಕಾರಿನ ಕೀಲಿಕೈಗಳನ್ನು ಕಳೆದುಕೊಳ್ಳುತ್ತಿದ್ದೀರಾ? ಅದನ್ನು ಮತ್ತೆ ಪಡೆಯಲು ಸಾಕಷ್ಟು ಹಣ ವ್ಯಯಿಸುವ ಚಿಂತೆ ನಿಮ್ಮನ್ನು ಕಾಡುತ್ತಿದೆಯಾ?
ಚಿಂತೆಬೇಡ, ಇನ್ನು ಮುಂದೆ ಕಾರಿನ ಕೀಲಿಕೈ ಕಳೆದುಹೋದರೆ ನಿಮ್ಮ ಸ್ಮಾರ್ಟ್ ಫೋನ್ ಉಪಯೋಗಿಸಿ ಕಾರಿನ ಬಾಗಿಲು ತೆರೆಯಬಹುದು! ಅಂತಹುದೊಂದು ಕಾಲ ಸಮೀಪಿಸುತ್ತಿದೆ ಎಂದಿದ್ದಾರೆ ತಂತ್ರಜ್ಞರು.

ದಕ್ಷಿಣ ಕೊರಿಯಾದ ಪ್ರಮುಖ ವಾಹನ ಕಂಪೆನಿ `ಹ್ಯುಂಡೈ'ನ ತಂತ್ರಜ್ಞರು ಸ್ಮಾರ್ಟ್‌ಫೋನನ್ನೇ ಕಾರಿನ ಕೀಲಿಕೈಯಾಗಿ ಉಪಯೋಗಿಸುವಂತಹ ಹೊಸ ವಿಧಾನವೊಂದನ್ನು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನ ಇನ್ನೆರಡು ವರ್ಷಗಳಲ್ಲಿ ಕಾರು ಮಾಲೀಕರಿಗೆ ಲಭ್ಯವಾಗಲಿದೆ ಎಂಬುದು ತಂತ್ರಜ್ಞರ ಭರವಸೆಯ ನುಡಿ.ಈ `ಸ್ಮಾರ್ಟ್' ತಂತ್ರಜ್ಞಾನಕ್ಕೆ ಬ್ಲೂ ಟೂತ್ ತಂತ್ರಜ್ಞಾನದ ಬದಲಾಗಿ ಹ್ಯುಂಡೈನ ಹೊಸಬಗೆಯ `ವೈರ್‌ಲೆಸ್ ನಿಯರ್ ಫೀಲ್ಡ್ ಕಮ್ಮುನಿಕೇಷನ್'(ಎನ್‌ಎಫ್‌ಸಿ) ಎಂಬ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಿಮ್ಮ   ಸ್ಮಾರ್ಟ್‌ಫೋನನ್ನು ಕಾರಿನ ಕಿಟಕಿ ಮೇಲೆ ಅಳವಡಿಸಿರುವ ಸಣ್ಣ ಟ್ಯಾಗ್(ಅನ್ ಪವರ್ಡ್ ಎನ್ ಎಫ್ ಸಿ ಚಿಪ್) ಮೇಲೆ ಹಾಯಿಸಿದರೆ ನಿಮ್ಮ ಕಾರಿನ ಬಾಗಿಲು ಲಾಕ್ ಆಗುತ್ತವೆ ಮತ್ತು ತೆರೆದುಕೊಳ್ಳುತ್ತವೆ.

ನಿಮ್ಮ ಸ್ಮಾರ್ಟ್‌ಫೋನನ್ನು ಕಾರಿನಲ್ಲಿ ಇಟ್ಟಾಗ ಅದು ಕೇಬಲ್ ಸಂಪರ್ಕದ ನೆರವಿಲ್ಲದೆ ಚಾರ್ಜ್ ಆಗಿ ಏಕಕಾಲದಲ್ಲಿ ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಟಚ್‌ಸ್ಕ್ರೀನ್‌ನೊಂದಿಗೂ ಸಂಪರ್ಕ ಸಾಧಿಸಿಕೊಳ್ಳಬಲ್ಲದಾಗಿರುತ್ತದೆ. ಈ ಹೊಸ ವಿಧಾನದಿಂದ ಕಾರಿನಲ್ಲಿ ರೇಡಿಯೊ ಕೇಂದ್ರ, ಸೀಟಿನ ಸ್ಥಿತಿ ಮತ್ತು ಕನ್ನಡಿ ಹೊಂದಾಣಿಕೆ ಹಾಗೂ ವಿವಿಧ ಚಾಲಕರ ವೈಯುಕ್ತಿಕ ಮಾಹಿತಿ ಸೇರಿದಂತೆ ಕಾರಿನ ಹಲವು ಆದ್ಯತೆಗಳನ್ನು ಸಂಗ್ರಹಿಸಬಹುದಾಗಿದೆ. ಇತ್ತೀಚೆಗೆ ಜರ್ಮನಿಯಲ್ಲಿ ಹ್ಯುಂಡೈನ `ಐ 30' ಕಾರಿನಲ್ಲಿ ಈ ಹೊಸ ವಿಧಾನದ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.

ಈ ವಿಧಾನವನ್ನು ಮುಖ್ಯವಾಹಿನಿಯ ಗ್ರಾಹಕರಿಗಾಗಿ ಪರಿಣಿತಗೊಳಿಸಿರುವುದು ಕಾರು ಉತ್ಪಾದಕರ ಗುರಿಯಾಗಿತ್ತು ಎಂದು ಹ್ಯುಂಡೈ ಹೇಳಿದೆ.
ಇದರಿಂದ ಈಗಿರುವ ಸ್ಮಾರ್ಟ್ ಫೋನ್ ತಂತ್ರಜ್ಞಾನದ ಆಲ್-ಇನ್-ಒನ್ ಕ್ರಿಯಾಶೀಲತೆಯನ್ನು ಸಜ್ಜುಗೊಳಿಸಲು ಹಾಗೂ ದೈನಂದಿನ ಚಾಲನೆ ಸಂಯೋಜಿಸಲು ಹ್ಯುಂಡೈಗೆ ಸಾಧ್ಯವಾಗಿದೆ' ಎನ್ನುತ್ತಾರೆ ಹ್ಯುಂಡೈ ಮೋಟರ್‌ನ ಮುಖ್ಯ ನಿರ್ವಹಣಾಧಿಕಾರಿ ಅಲನ್ ರಷ್ ಫೋರ್ತ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.