ADVERTISEMENT

100 ಮೆಗಾಪಿಕ್ಸೆಲ್ ಕ್ಯಾಮೆರಾ!

ಲಾಗಿನ್

ಕೆ.ಎಸ್.ಗಿರೀಶ್
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST
100  ಮೆಗಾಪಿಕ್ಸೆಲ್ ಕ್ಯಾಮೆರಾ!
100 ಮೆಗಾಪಿಕ್ಸೆಲ್ ಕ್ಯಾಮೆರಾ!   

ಈಗೇನಿದ್ದರೂ `ಮೆಗಾಪಿಕ್ಸೆಲ್' ಎಂಬುದು ಮನೆಮಾತಾಗಿದೆ. ಇಂದಿನ ಡಿಜಿಟಲ್ ಯುಗದ ಕಣ್ಣೇ ಆಗಿರುವ ಕ್ಯಾಮೆರಾಗಳಲ್ಲಂತೂ ಮೆಗಾಪಿಕ್ಸೆಲ್‌ಗಳ ಲೆಕ್ಕಾಚಾರವೇ ಜೋರು. ಒಂದು ಕ್ಯಾಮೆರಾದ ಮೆಗಾಪಿಕ್ಸೆಲ್ ಸಾಮರ್ಥ್ಯ ಅಬ್ಬಾಬ್ಬಾ ಎಂದರೆ ಎಷ್ಟಿರಬಹುದು?10, 15, 20 ಎಂಪಿ...
ಸದ್ಯ 100 ಮೆಗಾಪಿಕ್ಸೆಲ್ ಕ್ಯಾಮೆರಾ ಅಭಿವೃದ್ದಿಪಡಿಸಿರುವುದಾಗಿ ಚೀನಾ ವಿಜ್ಞಾನ ಅಕಾಡೆಮಿಯ `ಆಪ್ಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅಧ್ಯಯನ ಕೇಂದ್ರ'ದ ತಂತ್ರಜ್ಞರು ಹೇಳಿಕೊಂಡಿದ್ದಾರೆ.

ಅರೇ ಇಷ್ಟೇನಾ...? ಈಗಾಗಲೇ ಬ್ರಿಟನ್ ತಂತ್ರಜ್ಞರು 570 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸೃಷ್ಟಿಸಿದ್ದಾರೆ. ಅಂತಹದರಲ್ಲಿ ಇದೇನು ಮಹಾ ಎಂದು ಮೂಗು ಮುರಿಯದಿರಿ.

100 ಮೆಗಾಪಿಕ್ಸೆಲ್ ಜತೆಗೆ ಇನ್ನೂ ಹಲವು ಹತ್ತು ವಿಶೇಷಣಗಳನ್ನು ತನ್ನೊಳಗಿಟ್ಟುಕೊಂಡಿದೆ ಈ ಚೀನಿ ಕ್ಯಾಮೆರಾ. ಇದು ಅತ್ಯಂತ ಹೆಚ್ಚು ರೆಸಲ್ಯೂಷನ್‌ನಲ್ಲಿ ಚಿತ್ರವನ್ನು ಸೆರೆ ಹಿಡಿಯಬಲ್ಲದು. ವೈಮಾನಿಕ ಸಮೀಕ್ಷಾ ಕಾರ್ಯವನ್ನೂ ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತದೆ. ಇದನ್ನು ಮುಖ್ಯವಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಳಸಬಹುದು ಎನ್ನುತ್ತಾರೆ ಇದನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರು.

10,240x10,240 ಪಿಕ್ಸೆಲ್‌ಗಳು ಈ ಕ್ಯಾಮೆರಾಕ್ಕಿದೆ. ಇದು ಅತ್ಯಂತ ಚಿಕ್ಕ ಗಾತ್ರದ್ದು, ಅಷ್ಟೇ ಹಗುರವಾದುದು ಎಂಬುದೇ ಇದರ ಮತ್ತೊಂದು ವೈಶಿಷ್ಟ್ಯ. ಅಲ್ಲದೆ (ಮೈನಸ್) -20ರಷ್ಟು ಹೆಪ್ಪುಗಟ್ಟಿಸುವ ಉಷ್ಣಾಂಶದಲ್ಲೂ ಹಾಗೂ 55 ಡಿಗ್ರಿಯಷ್ಟು ಗರಿಷ್ಠ ತಾಪಮಾನದಲ್ಲೂ ಇದು ಅತ್ಯಂತ ಹೆಚ್ಚು ನಿಖರವಾಗಿ ಕಾರ್ಯನಿರ್ವಹಿಸಬಲ್ಲದು. ಇವೆಲ್ಲವೂ ರದ ಹೆಚ್ಚುಗಾರಿಕೆಗಳು.

ವೈಮಾನಿಕ ಸಮೀಕ್ಷೆ ಮೂಲಕ ನಗರದ ನಕಾಶೆ ಸಿದ್ಧಪಡಿಸುವಾಗ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಮೇಲಿನಿಂದ ಅತಿ ದೂರದ ಚಿತ್ರಗಳನ್ನು ಸ್ಪಷ್ಟವಾಗಿ ತೆಗೆಯುವುದಕ್ಕೆ ಈ 100 ಮೆಗಾಪಿಕ್ಸೆಲ್ ಕ್ಯಾಮೆರಾ ಬಳಸಬಹುದಾಗಿದೆ ಎನ್ನುತ್ತಾರೆ ತಂತ್ರಜ್ಞರು.

ಇದರಲ್ಲಿ ಸುಧಾರಿತ ಆಪ್ಟಿಕಲ್ ವ್ಯವಸ್ಥೆ, ಕ್ಯಾಮೆರಾ ನಿಯಂತ್ರಣ ವ್ಯವಸ್ಥೆ ಹಾಗೂ ಅತಿ ಹೆಚ್ಚಿನ ದತ್ತಾಂಶ ಸಂಗ್ರಹ ಸಾಮರ್ಥ್ಯ ಇರುವುದರಿಂದ ಇದನ್ನು `ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆ'ಯಲ್ಲಿ ಬಳಸಲು ಚೀನಾ ಸರ್ಕಾರ ನಿರ್ಧರಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.