ಲೆನೊವೊ ಸಂಸ್ಥೆ ಫಿಟ್‍ನೆಸ್ ಸ್ಮಾರ್ಟ್ ಬ್ಯಾಂಡ್ ಕಾರ್ಡಿಯೊ 2ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೃದಯ ಬಡಿತ ಪ್ರಮಾಣವನ್ನು ಗಮನಿಸುವ ಮೂಲಕ ದಿನ ನಿತ್ಯದ ದೈಹಿಕ ಚಟುವಟಿಕೆಯ ಪ್ರಮಾಣವನ್ನು ಇದು ಅಂದಾಜು ಮಾಡಲಿದೆ.
ಓಟ, ನಡಿಗೆ, ಸೈಕ್ಲಿಂಗ್ ಮಾಡಿರುವ ಕರಿತು ಮಾಹಿತಿ ನೀಡಲಿದೆ. ಸಂದೇಶಗಳು ಹಾಗೂ ವಾಯ್ಸ್ ಕಾಲ್ ನೋಟಿಫಿಕೇಶನ್ ವ್ಯವಸ್ಥೆಯನ್ನೂ ಇದು ಹೊಂದಿದೆ. ಗಾಢ ನಿದ್ದೆ ಹಾಗೂ ಸಾಮಾನ್ಯ ನಿದ್ದೆಯ ಪ್ರಮಾಣವನ್ನೂ ಹೇಳಲಿದೆ. ದೀರ್ಘಕಾಲ ಕೂತಲ್ಲೇ ಕೆಲಸ ಮಾಡುತ್ತಿದ್ದರೆ ಓಡಾಡಲು ಸಲಹೆ ನೀಡಲಿದೆ. ಬೆಲೆ ₹1499.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.