ADVERTISEMENT

Chandrayaan-3 : ಭೂಮಿಯ ಅಂತಿಮ ಕಕ್ಷೆ ಸೇರಿದ ಬಾಹ್ಯಾಕಾಶ ನೌಕೆ

ಪಿಟಿಐ
Published 25 ಜುಲೈ 2023, 11:10 IST
Last Updated 25 ಜುಲೈ 2023, 11:10 IST
ಚಂದ್ರಯಾನ–3 ಚಿತ್ರ: (Twitter/ ISRO)
ಚಂದ್ರಯಾನ–3 ಚಿತ್ರ: (Twitter/ ISRO)   

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಯು ಮಹತ್ವಾಕಾಂಕ್ಷೆ ಚಂದ್ರಯಾನ–3 ಯೋಜನೆಯ 'ಬಾಹ್ಯಾಕಾಶ ನೌಕೆ'ಯನ್ನು ಭೂಮಿ ಸುತ್ತಲಿನ ಅಂತಿಮ (ಐದನೇ) ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

'ಇಲ್ಲಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಬಾಹ್ಯಾಕಾಶ ನೌಕೆಗೆ ಅಗತ್ಯ ನೂಕುಬಲ ನೀಡುವ ಐದನೇ ಹಂತದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ನೌಕೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.‌‌

‘ಬಾಹ್ಯಾಕಾಶ ನೌಕೆಯು 1,27,609 ಕಿ.ಮೀ. x 236 ಕಿ.ಮೀ. ಎತ್ತರಕ್ಕೆ ಏರುವ ಸಾಧ್ಯತೆಯಿದೆ. ಪರಿಶೀಲನೆ ಬಳಿಕ ಇದು ಖಚಿತವಾಗಲಿದೆ' ಎಂದು ಹೇಳಿದೆ.

ADVERTISEMENT

ಆಗಸ್ಟ್‌ 1ರಂದು ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸುವ ಕಾರ್ಯ ಆರಂಭವಾಗಲಿದೆ. ಅಂದು ಮಧ್ಯರಾತ್ರಿ 12 ಗಂಟೆಯಿಂದ 1ಗಂಟೆ ನಡುವೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದೆ. ಆಗಸ್ಟ್‌ 17ರಂದು ಪ್ಯೊಪಲ್ಷನ್‌ ಮಾಡ್ಯೂಲ್‌ ಮತ್ತು ಲ್ಯಾಂಡರ್ ಮಾಡ್ಯೂಲ್‌ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ.

ಆಗಸ್ಟ್‌ 23ರ ಸಂಜೆ 5.47ಕ್ಕೆ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಲಾಗುತ್ತದೆ ಎಂದು ತಿಳಿಸಿದೆ.

ಜುಲೈ 14ರಂದು ಇಸ್ರೊ ಚಂದ್ರಯಾನ–3 ಯೋಜನೆಯ ಭಾಗವಾಗಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.