ADVERTISEMENT

ಚಂದ್ರನಲ್ಲಿ ಹಗಲಿನ ಉಷ್ಣಾಂಶ 107, ರಾತ್ರಿ –153 ಡಿಗ್ರಿ ಸೆಲ್ಷಿಯಸ್

ಪೃಥ್ವಿರಾಜ್ ಎಂ ಎಚ್
Published 22 ಜುಲೈ 2019, 5:04 IST
Last Updated 22 ಜುಲೈ 2019, 5:04 IST
ಚಂದ್ರನ ಮೇಲೆ ಇಳಿದ ಮೊದಲ ಮಾನವ ನೀಲ್ ಆರ್ಮ್‌ ಸ್ಟ್ರಾಂಗ್
ಚಂದ್ರನ ಮೇಲೆ ಇಳಿದ ಮೊದಲ ಮಾನವ ನೀಲ್ ಆರ್ಮ್‌ ಸ್ಟ್ರಾಂಗ್   

ಮಾನವ ಚಂದ್ರನ ಅಂಗಳ ಪ್ರವೇಶಿಸಿ 50 ವರ್ಷಗಳು ಆಗಿವೆ. 1969ರ ಜುಲೈ 20ರಂದು ಖಗೋಳ ವಿಜ್ಞಾನಿಗಳಾದ ನೀಲ್ ಆರ್ಮ್‌ಸ್ಟ್ರಂಗ್ ಮತ್ತು ಬುಜ್ ಅಲ್ಡ್ರಿನ್ ಅವರು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದು ವಿಶ್ವವೇ ಬೆರಗಾಗುವಂತೆ ಮಾಡಿದರು. ಅಪೊಲೊ–11 ನೌಕೆ ಮೂಲಕ ಚಂದ್ರನ ಅಂಗಳ ಪ್ರವೇಶಿಸಿದ 6 ಗಂಟೆ ನಂತರ ಮೊದಲ ಬಾರಿಗೆ ನೀಲ್‌ ಆರ್ಮ್‌ಸ್ಟ್ರಂಗ್ ಅವರು ಚಂದ್ರನ ಅಂಗಳದಲ್ಲಿ ಕಾಲಿರಿಸಿ ದಾಖಲೆ ನಿರ್ಮಿಸಿದರು. ಅವರ ಹಿಂದೆಯೇ ಅಲ್ಡ್ರಿನ್ ಕೂಡ ನಡೆದು ಮಾನವನ ಹೆಜ್ಜೆಗುರುತುಗಳನ್ನು ಮೂಡಿಸಿದರು. ಈ ಸಾಧನೆಯ ಸಂಭ್ರಮದಲ್ಲಿ ಚಂದ್ರನ ಕೆಲವು ಸ್ವಾರಸ್ಯ ವಿಷಯಗಳ ಬಗ್ಗೆ ತಿಳಿಯೋಣ.

ನಾವೆಲ್ಲರೂ ಚಂದ್ರ ಎಂದು ಕರೆಯುತ್ತಿರುವ ನಮ್ಮ ಭೂಮಿಯ ಏಕೈಕ ಉಪಗ್ರಹದ ನಿಜವಾದ ಹೆಸರು ‘ಲೂನಾ’. ಬ್ರಹ್ಮಾಂಡದಲ್ಲಿರುವ ಹಲವು ಚಂದ್ರರಲ್ಲಿ ನಮ್ಮ ಚಂದ್ರನೂ ಒಬ್ಬ. ಈವರೆಗೆ ಪತ್ತೆಮಾಡಿರುವ ಚಂದ್ರರ ಪೈಕಿ ಗಾತ್ರದಲ್ಲಿ ಐದನೇ ಅತೀ ದೊಡ್ಡ ಉಪಗ್ರಹ.

ADVERTISEMENT

ಚಂದ್ರ ನಮ್ಮ ಭೂಮಿ ಸುತ್ತಾ ಒಂದು ಸುತ್ತುಹಾಕಿ ಬರುವುದಕ್ಕೆ 27 ದಿನ 3ಗಂಟೆ ಬೇಕು. ಚಂದ್ರನ ಬೆಳದಿಂಗಳು ಭೂಮಿಗೆ ಬೆಳಕು ನೀಡುವುದನ್ನು ನೋಡಿ ನಾವೆಲ್ಲರೂ ಖುಷಿ ಪಡುತ್ತವೇ. ಆದರೆ ಆ ಕಾಂತಿ ಚಂದ್ರನದ್ದಲ್ಲ. ಚಂದ್ರನಿಗೆ ಬೆಳಕು ನೀಡುವ ಶಕ್ತಿ ಇಲ್ಲ. ಕಾರಣ ಚಂದ್ರ ಉಪಗ್ರಹವೇ ಹೊರತು ನಕ್ಷತ್ರವಲ್ಲ. ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿದ್ದು, ಅದರ ಬೆಳಕು ಪ್ರತಿಫಲಿಸಿ ಭೂಮಿಗೆ ಬೆಳಕು ಬರುತ್ತದೆ.

ಚಂದ್ರ

ನಾವು ಇಲ್ಲಿ ನೋಡುತ್ತಿರುವಂತೆ ಚಂದ್ರನಲ್ಲೂ ಎತ್ತರದ ಪರ್ವತಗಳಿವೆ. ಈವರೆಗೆ ಗುರುತಿಸಲಾಗಿರುವ ಚಂದ್ರನಲ್ಲಿನ ಪರ್ವತಗಳ ಪೈಕಿ, ಮಾನ್ಸ್ ಹೈಗೆನ್ಸ್ ಪರ್ವತ ಅತೀ ದೊಡ್ಡದು. ಇದು ಸುಮಾರು 15 ಸಾವಿರ ಅಡಿ ಎತ್ತರವಿದೆ. ಮೌಂಟ್‌ ಎವರೆಸ್ಟ್‌ಗೆ ಹೋಲಿಸಿದರೆ ಅದರ ಅರ್ಧ ಭಾಗವಿದೆ.

ಚಂದ್ರನಲ್ಲಿ ಗುರುತ್ವಾಕರ್ಷಣಾ ಶಕ್ತಿ ತುಂಬಾ ಕಡಿಮೆ. ಹೆಜ್ಜೆ ಇಡುವುದಕ್ಕೂ ಕಷ್ಟಪಡಬೇಕು. ಚಂದ್ರ ಹಗಲಿನಲ್ಲಿ ತುಂಬಾ ಬಿಸಿಯಾಗಿರುತ್ತಾನೆ. ಆಗ ಅಲ್ಲಿನ ಉಷ್ಣಾಂಶ ಸುಮಾರು 107 ಡಿಗ್ರಿವರೆಗೆ ಇರುತ್ತದೆ. ರಾತ್ರಿಯಾಗುತ್ತಿದ್ದಂತೇ ತಂಪಾಗುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ ಉಷ್ಣಾಂಶ –153 ಡಿಗ್ರಿಗೆ ಇಳಿಯುತ್ತದೆ!

ಈವರಗೆ ಚಂದ್ರನಲ್ಲಿಗೆ 12 ಮಂದಿ ಹೋಗಿದ್ದಾರೆ. ಚಂದ್ರನ ನೆಲದ ಮೇಲೆ ಇಡುವ ಮನುಷ್ಯರ ಪಾದಮುದ್ರೆಗಳು ಹಲವು ವರ್ಷಗಳ ವರೆಗೆ ಹಾಗೆಯೇ ಇರುತ್ತವೆ.

ದೂರವಾಗುತ್ತಿದ್ದಾನೆ ಚಂದ್ರ!: ನಮ್ಮ ಭೂಮಿಯ ಸುತ್ತಾ ಚಂದ್ರ ಒಂದೇ ಅಕ್ಷದಲ್ಲಿ ಸುತ್ತುತ್ತಿದ್ದರೂ ಪ್ರತೀ ವರ್ಷ 3.8 ಸೆಂ.ಮೀನಷ್ಟು ದೂರಕ್ಕೆ ಸರಿಯುತ್ತಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆ

ಚಂದ್ರ ಭೂಮಿಗೆ ತೀರಾ ಸಮೀಪದಲ್ಲಿರುವುದರಿಂದ ಅಲ್ಲಿ ನೀರಿರುವ ಸಾಧ್ಯತೆಗಳ ಬಗ್ಗೆ ಹಲವು ವರ್ಷಗಳಿಂದ ನಿರಂತರವಾಗಿ ಸಂಶೋಧನೆ ಮಾಡಲಾಗುತ್ತಿದೆ. ಕಾರಣ ನಮ್ಮ ವಾಸಕ್ಕೆ ಚಂದ್ರ ನೆಲೆ ಕಲ್ಪಿಸುತ್ತಾನೆ ಎಂಬ ಆಸೆ.

ಚಂದ್ರ ಭೂಮಿಯಿಂದ3.84 ಲಕ್ಷ ಕಿ.ಮೀ ದೂರದಲ್ಲಿದ್ದಾನೆ.ಚಂದ್ರನ ವ್ಯಾಸ3,475 ಕಿ.ಮೀ

ಚಂದ್ರನ ಬಗ್ಗೆ ತಿಳಿಯಲುನಾವೇನು ಮಾಡಬೇಕು?

ಚಂದ್ರನ ಕುರಿತು ಮಾಡಿರುವ ಈ ವರೆಗಿನ ಸಂಶೋಧನೆಗಳ ಬಗ್ಗೆ ಮಾಹಿತಿ ಕಲೆಹಾಕಬಹುದು. ದೂರದರ್ಶಕದ ಮೂಲಕ ಚಂದ್ರನನ್ನು ವೀಕ್ಷಿಸಿ ಅಧ್ಯಯನ ಮಾಡುವುದುನ್ನು ಹವ್ಯಾಸವಾಗಿ ಸ್ವೀಕರಿಸಬಹುದು. ಸಹಪಾಠಿಗಳೊಂದಿಗೆ ಚಂದ್ರನ ಬಗ್ಗೆ ಚರ್ಚಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರನ ಕುರಿತು ಮಾಹಿತಿ ಹಂಚಿಕೊಳ್ಳಬಹುದು.

ದೂರವಾಗುತ್ತಿದ್ದಾನೆ ಚಂದ್ರ!

ನಮ್ಮ ಭೂಮಿಯ ಸುತ್ತಾ ಚಂದ್ರ ಒಂದೇ ಅಕ್ಷದಲ್ಲಿ ಸುತ್ತುತ್ತಿದ್ದರೂ ಪ್ರತೀ ವರ್ಷ 3.8 ಸೆಂ.ಮೀನಷ್ಟು ದೂರಕ್ಕೆ ಸರಿಯುತ್ತಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ. ಚಂದ್ರ ಭೂಮಿಗೆ ತೀರಾ ಸಮೀಪದಲ್ಲಿರುವುದರಿಂದ ಅಲ್ಲಿ ನೀರಿರುವ ಸಾಧ್ಯತೆಗಳ ಬಗ್ಗೆ ಹಲವು ವರ್ಷಗಳಿಂದ ನಿರಂತರವಾಗಿ ಸಂಶೋಧನೆ ಮಾಡಲಾಗುತ್ತಿದೆ. ಕಾರಣ ನಮ್ಮ ವಾಸಕ್ಕೆ ಚಂದ್ರ ನೆಲೆ ಕಲ್ಪಿಸುತ್ತಾನೆ ಎಂಬ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.