ADVERTISEMENT

ವಾಟ್ಸ್ಯಾಪ್, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಚೀನಾ ಪ್ರತೀಕಾರ ಸುದ್ದಿ ಸುಳ್ಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 7:39 IST
Last Updated 1 ಮಾರ್ಚ್ 2019, 7:39 IST
   

ಬೆಂಗಳೂರು: ಪಾಕಿಸ್ತಾನದ ಬಲಾಕೋಟ್‌ನಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ,‘ಪಾಕಿಸ್ತಾನವು ಚೀನಾದ ಸಹಾಯಪಡೆದು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದೆ’ ಎನ್ನುವ ಸುಳ್ಳುಸುದ್ದಿಯೊಂದು ವಾಟ್ಸ್ಯಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

‘ಗೃಹ ಸಚಿವಾಲಯದ ವರಿಷ್ಠ ತನಿಖಾಧಿಕಾರಿ ಬಿಸ್ವಜೀತ್ ಮುಖರ್ಜಿ’ ಎನ್ನುವ ಅಡಿಬರಹದೊಂದಿಗೆ ಓಡಾಡುತ್ತಿರುವ ಈ ಸುಳ್ಳುಸುದ್ದಿಯನ್ನು ನಿಜ ಎಂದೇ ನಂಬಿ ಹಲವರು ಫಾರ್ವಾರ್ಡ್‌ ಮತ್ತು ಶೇರ್ ಮಾಡುತ್ತಿದ್ದಾರೆ. ‘ಪ್ರಜಾವಾಣಿ’ಆನ್‌ಲೈನ್ ತಂಡವು biswajit mukherjee investigation officer ಸರ್ಚ್‌ವರ್ಡ್‌ ಕೊಟ್ಟು ಗೂಗಲ್‌ನಲ್ಲಿ ಹುಡುಕಿದಾಗ2017ನೇ ಅಕ್ಟೋಬರ್ 13ರಂದು ರೆಡಿಟ್‌ನಲ್ಲಿ ಪೋಸ್ಟ್‌ ಆಗಿದ್ದ ಬರಹವೊಂದು ಕಾಣಿಸಿತು.

ಈ ಬರಹದ ಬಗ್ಗೆ ರೆಡಿಟ್‌ನಲ್ಲಿ ಸಾಕಷ್ಟು ಚರ್ಚೆಗಳು ಆಗಿವೆ. ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ತಮಾಷೆಗಾಗಿ ಬರೆದ ಬರಹ ಅಲ್ಲಿಇಲ್ಲಿ ಓಡಾಡಿ ಪುನಃ ಬಂದಿದೆ ಎಂದು (We did it r/india ! Received this in my WhatsApp group. Made up of college batch mates) ಒಬ್ಬರು ಘೋಷಿಸಿಕೊಂಡಿದ್ದರು. 2017ರಲ್ಲಿಯೇ ಇದು ವೈರಲ್ ಆಗಿದ್ದ ಬಗ್ಗೆಯೂ ರೆಡಿಟ್‌ನಲ್ಲಿ ಉಲ್ಲೇಖವಿದೆ. ವ್ಯಕ್ತಿಯೊಬ್ಬರು ಇದರ ಮೂಲ ಹುಡುಕಲು ಯತ್ನಿಸಿರುವ ಮಾಹಿತಿಯೂ ರೆಡಿಟ್‌ನಲ್ಲಿ ದಾಖಲಾಗಿದೆ.

ADVERTISEMENT

ಇದೀಗ ಭಾರತ–ಪಾಕ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಈ ಹಳೆಯ ಪೋಸ್ಟ್ ಕನ್ನಡ ಅನುವಾದದೊಂದಿಗೆ ಮತ್ತೆ ವಾಟ್ಸ್ಯಾಪ್–ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.