ADVERTISEMENT

ಗೂಗಲ್ ಸರ್ಚ್ ಎಂಜಿನ್‌ನಲ್ಲಿ ದೋಷ: ಸಾವಿರಾರು ಬಳಕೆದಾರರಿಂದ ವರದಿ

ರಾಯಿಟರ್ಸ್
Published 9 ಆಗಸ್ಟ್ 2022, 4:17 IST
Last Updated 9 ಆಗಸ್ಟ್ 2022, 4:17 IST
   

ಬೆಂಗಳೂರು: ಸೋಮವಾರ ಗೂಗಲ್ ಸರ್ಚ್ ಎಂಜಿನ್ ಜಾಗತಿಕವಾಗಿಡೌನ್ ಆಗಿದ್ದ ಬಗ್ಗೆ ಸಾವಿರಾರು ಬಳಕೆದಾರರು ವರದಿ ಮಾಡಿದ್ದಾರೆ.

ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್‌ಸೈಟ್ Downdetector.com ಪ್ರಕಾರ, ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್ ಗೂಗಲ್‌ನಲ್ಲಿ ದೋಷ ಕಂಡುಬಂದ ಬಗ್ಗೆ 40,000 ಮಂದಿ ವರದಿ ಮಾಡಿದ್ದಾರೆ.

ಡೌನ್‌ಡೆಕ್ಟರ್ ಜಾಲತಾಣವು, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ಸಲ್ಲಿಸಿದ ದೋಷಗಳ ದೂರು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಟ್ರ್ಯಾಕ್ ಮಾಡುತ್ತದೆ.

ADVERTISEMENT

ಈ ಕುರಿತಂತೆ ರಾಯಿಟರ್ಸ್, ಗೂಗಲ್ ಸಂಸ್ಥೆಯನ್ನು ಸಂಪರ್ಕಿಸಿದ್ದು, ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಗೂಗಲ್ ಸರ್ಚ್‌ ಎಂಜಿನ್‌ನಲ್ಲಿ ದೋಷಗಳು ಅಪರೂಪ. ಆದರೆ, ಸಾವಿರಾರು ಬಳಕೆದಾರರು ನ್ಯೂಯಾರ್ಕ್ ಸಮಯ ರಾತ್ರಿ ಸುಮಾರು 9 ಗಂಟೆಗೆ(ಭಾರತೀಯ ಕಾಲಮಾನ ಬೆಳಿಗ್ಗೆ 6.30) ಸಮಸ್ಯೆಗಳನ್ನು ಎದುರಿಸಿರುವುದಾಗಿ ಹೇಳಿದ್ದಾರೆ. ಸುಮಾರು 10 ಗಂಟೆಗೆ ಸಮಸ್ಯೆ ಬಗೆಹರಿದಿದೆ.

Googleನಲ್ಲಿ ಸರ್ಚ್‌ಗೆ ಪ್ರಯತ್ನಿಸಿದಾಗ ‘500 Error' ಗೋಚರಿಸಿದೆ. ಸರ್ವರ್ ದೋಷ ಕಂಡುಬಂದಿರುವುದರಿಂದ ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂಬ ಸಂದೇಶ ಸಹ ಬಂದಿದೆ.

ತೈವಾನ್ ಮತ್ತು ಜಪಾನ್‌ನಲ್ಲಿ Google ವೆಬ್‌ಸೈಟ್ ಅನ್ನು ಓಪನ್ ಮಾಡುವಲ್ಲಿ ಮತ್ತು ಹುಡುಕಾಟಗಳನ್ನು ಮಾಡುವಾಗಲೂ ತೊಂದರೆಗಳು ಕಂಡುಬಂದಿವೆ ಎಂದು ಹಿಂದೂಸ್ಥಾನ್ ಟೈಮ್ಸ್ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.