ADVERTISEMENT

ಕೊರೊನಾ ಯೋಧರಿಗೆ ಸಶಸ್ತ್ರ ಪಡೆಗಳ ಗೌರವ: ವಿಡಿಯೊ ಟ್ವೀಟ್ ಮಾಡಿದ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2020, 13:26 IST
Last Updated 3 ಮೇ 2020, 13:26 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಸಶಸ್ತ್ರ ಪಡೆಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಸಿಬ್ಬಂದಿಗೆ ಭಾನುವಾರ ಗೌರವ ಸಲ್ಲಿಸಿದ ವಿಡಿಯೊ ತುಣುಕನ್ನುಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.

‘ಮುಂಚೂಣಿಯಲ್ಲಿದ್ದು ಧೈರ್ಯದಿಂದ ಕೋವಿಡ್–19ರ ವಿರುದ್ಧ ಹೋರಾಡುತ್ತಿರುವವರಿಗೆ ನಮ್ಮ ಸಶಸ್ತ್ರಪಡೆಗಳು ಗೌರವ ಅರ್ಪಿಸಿವೆ’ ಎಂದು ಮೋದಿ ಹೇಳಿದ್ದಾರೆ.

2.16 ನಿಮಿಷದ ವಿಡಿಯೊ ಕ್ಲಿಪ್‌ನಲ್ಲಿ ಮಿಲಿಟರಿ ಬ್ಯಾಂಡ್‌ವೃಂದದಸಂಗೀತ ಮತ್ತು ಹೆಲಿಕಾಪ್ಟರ್‌ಗಳು ವಿವಿಧ ಆಸ್ಪತ್ರೆಗಳು ಮತ್ತು ರಾಷ್ಟ್ರೀಯ ಸ್ಮಾರಕಗಳ ಮೇಲೆ ಪುಷ್ಪವೃಷ್ಟಿ ಮಾಡುವ ದೃಶ್ಯಗಳಿವೆ. ತಮ್ಮ ಮೇಲೆ ಹೂ ಪಕಳೆಗಳು ಬಿದ್ದಾಗ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹೊಡೆದ ದೃಶ್ಯಗಳೂ ಈ ವಿಡಿಯೊದಲ್ಲಿ ಸೆರೆಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.