ADVERTISEMENT

ಯುಪಿಐ ವಹಿವಾಟು: ಫೋನ್‌ಪೆ ಮುಂದೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 18:52 IST
Last Updated 19 ಜನವರಿ 2021, 18:52 IST
   

ಬೆಂಗಳೂರು: ಸಣ್ಣ ಮೊತ್ತದ ಹಣ ಪಾವತಿಯ ಜನಪ್ರಿಯ ವ್ಯವಸ್ಥೆಗಳಲ್ಲಿ ಒಂದಾಗಿರುವ ‘ಯುಪಿಐ’ನಲ್ಲಿ (ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್‌) ಫೋನ್‌ಪೆ ಕಂಪನಿಯು ಡಿಸೆಂಬರ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿ ಗೂಗಲ್ ಪೇ ಇದೆ.

ಪೇಟಿಎಂ ಮೂರನೆಯ ಸ್ಥಾನದಲ್ಲಿದೆ. ಫೋನ್‌ಪೆ ಮೂಲಕ ಡಿಸೆಂಬರ್‌ ತಿಂಗಳಿನಲ್ಲಿ ಒಟ್ಟು 90.20 ಕೋಟಿ ವಹಿವಾಟುಗಳು ನಡೆದಿವೆ. ಈ ಯುಪಿಐ ಆ್ಯಪ್‌ ಮೂಲಕ ಡಿಸೆಂಬರ್‌ನಲ್ಲಿ ನಡೆದ ವಹಿವಾಟಿನ ಒಟ್ಟು ಮೊತ್ತ ₹ 1.82 ಲಕ್ಷ ಕೋಟಿ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ.

ಗೂಗಲ್‌ ಪೇ ಆ್ಯಪ್ ಮೂಲಕ85.44 ಕೋಟಿ ವಹಿವಾಟುಗಳು ನಡೆದಿವೆ. ವಹಿವಾಟುಗಳ ಒಟ್ಟು ಮೊತ್ತ ₹ 1.76 ಲಕ್ಷ ಕೋಟಿ. ಮೂರನೆಯ ಸ್ಥಾನದಲ್ಲಿ ಇರುವ ಪೇಟಿಎಂ ಆ್ಯಪ್ ಮೂಲಕ ಒಟ್ಟು 25.63 ಕೋಟಿ ವಹಿವಾಟುಗಳು ನಡೆದಿದ್ದು, ₹ 31 ಸಾವಿರ ಕೋಟಿಯಷ್ಟು ಹಣದ ವರ್ಗಾವಣೆ ನಡೆದಿದೆ ಎಂದು ಎನ್‌ಪಿಸಿಐ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ADVERTISEMENT

ಒಟ್ಟು 207 ಬ್ಯಾಂಕ್‌ಗಳು ಈಗ ಯುಪಿಐ ವ್ಯವಸ್ಥೆಯ ಅಡಿಯಲ್ಲಿ ಹಣದ ವರ್ಗಾವಣೆ, ಪಾವತಿಗೆ ಅವಕಾಶ ಕಲ್ಪಿಸಿವೆ. 2016ರ ಏಪ್ರಿಲ್‌ನಲ್ಲಿ ಎನ್‌ಪಿಸಿಐ, ಯುಪಿಐ ವ್ಯವಸ್ಥೆಗೆ ಚಾಲನೆ ನೀಡಿದಾಗ ಕೇವಲ 21 ಬ್ಯಾಂಕ್‌ಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.