ADVERTISEMENT

ಮೊಬೈಲ್‌ ಹ್ಯಾಕ್‌ ಆದೀತು; ಈಗಲೇ ನಿಮ್ಮ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡ್ಕೊಳ್ಳಿ

ಏಜೆನ್ಸೀಸ್
Published 14 ಮೇ 2019, 12:01 IST
Last Updated 14 ಮೇ 2019, 12:01 IST
   

ಬೆಂಗಳೂರು: ನಿಮ್ಮ ಮೊಬೈಲ್‌ನಲ್ಲಿನ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಂಡಿದ್ದು ಯಾವಾಗ? ನಿಮ್ಮ ಕೆಲಸಗಳ ನಡುವೆ ಅದನ್ನು ನಿರ್ಲಕ್ಷಿಸಿದ್ದರೆ, ತಕ್ಷಣವೇ ಅದನ್ನು ಅಪ್‌ಡೇಟ್‌ ಮಾಡಿಕೊಳ್ಳಿ.

ಇಷ್ಟು ತುರ್ತಾಗಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಿ ಎಂದು ಹೇಳಲು ಕಾರಣವಿದೆ. ವಾಟ್ಸ್‌ಆ್ಯಪ್‌ನಲ್ಲಿ ಭದ್ರತೆಯ ದೋಷ ಕಂಡುಬಂದಿದೆ. ಇದನ್ನು ಪತ್ತೆ ಮಾಡಿರುವ ವಾಟ್ಸ್‌ಆ್ಯಪ್‌, ಅದಕ್ಕೊಂದು ಪರಿಹಾರವನ್ನು ನೀಡಿ ಅಪ್ಲಿಕೇಷನ್‌ ಅನ್ನು ಅಪ್‌ಡೇಟ್‌ ಮಾಡಿದೆ.

ಕೋಡ್‌ ಮೂಲಕ ಬರುವಒಂದು ಕರೆ(ಸ್ವೀಕರಿಸಿದರೂ ಅಥವಾ ಸ್ವೀಕರಿಸದಿದ್ದರೂ) ನಿಮ್ಮ ಮೊಬೈಲ್‌ ಅನ್ನುಹ್ಯಾಕ್‌ ಮಾಡುತ್ತದೆ. ಇದರಿಂದ ನಿಮ್ಮ ಮೊಬೈಲ್‌ನಲ್ಲಿನ ಎಲ್ಲಾ ಕರೆಯ ದಾಖಲೆ, ಸಂದೇಶ, ಇ–ಮೇಲ್‌ಗಳು, ಸಂಪರ್ಕ ಸಂಖ್ಯೆಗಳು.. ಹೀಗೆ ನಿಮ್ಮಿಂದ ಪಡೆದ ಎಲ್ಲಾ ದಾಖಲೆಗಳು ಇಸ್ರೇಲಿನ ಸೈಬರ್‌ ಇಂಟೆಲಿಜೆನ್ಸ್‌ ಕಂಪನಿ ಎನ್‌ಎಸ್‌ಒಗೆ ತೆರೆದುಕೊಳ್ಳಲಿದೆ.

ADVERTISEMENT

ಹಾಗಾಗಿ ಆಂಡ್ರಾಯ್ಡ್v2.19.134 ಮತ್ತು ಇದಕ್ಕಿಂತ ಹಿಂದಿನ ಆವೃತ್ತಿ ಹಾಗೂ ಐಫೋನ್‌ಗಳಲ್ಲಿ ಐಒಎಸ್‌v2.19.51 ಮತ್ತು ಹಿಂದಿನ ಆವೃತ್ತಿ, ವಿಂಡೋಸ್‌ ಫೋನ್‌ಗಳಲ್ಲಿv2.18.348 ಮತ್ತು ಹಿಂದಿನದು, ಟೈಜೆನ್‌v2.18.15 ಮತ್ತು ಹಿಂದಿನ ಆವೃತ್ತಿಯ ವಾಟ್ಸ್‌ಆ್ಯಪ್‌ ಮೆಸೆಂಜರ್‌ಅಪ್ಲಿಕೇಷನ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ.

ಈ ತಿಂಗಳ ಆರಂಭದಲ್ಲಿಯೇ ಈ ದೋಷವನ್ನು ವಾಟ್ಸ್‌ಆ್ಯಪ್‌ ಪತ್ತೆ ಹಚ್ಚಿತ್ತು. ಭದ್ರತೆಯನ್ನು ಬಲ‍ಪಡಿಸುವ ಉದ್ದೇಶದಿಂದ ಆ್ಯಪ್‌ ಅನ್ನು ಅಪ್‌ಡೇಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.