ADVERTISEMENT

18 ಸಾವಿರ ಎಂಎಎಚ್‌ ಬ್ಯಾಟರಿ ಫೋನ್‌!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:30 IST
Last Updated 6 ಫೆಬ್ರುವರಿ 2019, 19:30 IST
   

ಅಮೆರಿಕದ ಪ್ರಮುಖ ಬ್ಯಾಟರಿ ತಯಾರಿಕಾ ಕಂಪನಿ ಎನರ್ಜೈಸರ್‌, 18 ಸಾವಿರ ಎಂಎಎಚ್‌ ಬ್ಯಾಟರಿ ಮತ್ತು ಪೋಲ್ಡಿಂಗ್ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತನ್ನ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದೆ. ಇಷ್ಟೇ ಅಲ್ಲ ಫೆಬ್ರುವರಿ 25 ರಿಂದ ಬಾರ್ಸಿಲೋನಿಯಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ 26 ಹೊಸ ಫೋನ್‌ಗಳನ್ನೂ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
***

ಬಯೊಮೆಟ್ರಿಕ್‌ ಲಾಕ್‌
ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌ ಐಫೋನ್‌ಗಾಗಿ ಬಯೊಮೆಟ್ರಿಕ್‌ ಲಾಕ್ ಸೌಲಭ್ಯ ಕಲ್ಪಿಸಿದೆ. ಐಫೋನ್‌ನ ಕಾರ್ಯಾಚರಣೆ ವ್ಯವಸ್ಥೆಗೆ (ಐಒಎಸ್‌) ಅಪ್‌ಡೇಡ್‌ ಬಿಡುಗಡೆ ಮಾಡಿದೆ. ಇದನ್ನು ಅಪ್‌ಡೇಟ್‌ ಮಾಡಿಕೊಂಡರೆ ಹೊಸ ಬಯೋಮೆಟ್ರಿಕ್‌ ಅಥೆಂಟಿಕೇಷನ್‌ ಫೀಚರ್‌ ಲಭ್ಯವಾಗಲಿದೆ.

ವಾಟ್ಸ್‌ಆ್ಯಪ್‌ ಬಳಕೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಫೇಸ್‌ ಐಡಿ ಅಥವಾ ಟಚ್‌ ಐಡಿ ಮೂಲಕ ಅಪ್ಲಿಕೇಷನ್‌ ತೆರೆಯುವ ಸೌಲಭ್ಯ ನೀಡಿರುವುದಾಗಿ ತಿಳಿಸಿದೆ. ಇದರಿಂದಾಗಿ ಫೋನ್‌ ಅನ್‌ಲಾಕ್‌ ಆಗಿದ್ದರೂ ವಾಟ್ಸ್‌ಆ್ಯಪ್‌ ಮೆಸೇಜ್‌ಗಳನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ.

ADVERTISEMENT

ಸಕ್ರಿಯಗೊಳಿಸುವುದು ಹೇಗೆ? Settings > Account > Privacy > Screen Lock ಐಒಎಸ್‌ ಬೀಟಾ ಬಳಕೆದಾರರಿಗೆ ಕಳೆದ ವಾರವೇ ಈ ಸೌಲಭ್ಯ ಕಲ್ಪಿಸಿದ್ದು, ಇದೀಗ ವಿಶ್ವದಾದ್ಯಂತ ಎಲ್ಲಾ ಐಫೋನ್‌ ಬಳಕೆದಾರರಿಗೂ ನೀಡಲಾಗಿದೆ ಎಂದು ವಾಟ್ಸ್ಆ್ಯಪ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.