ADVERTISEMENT

ದಶಕ: ತುಂಬದ ‘ಕಣಜ’

ಮೇಲಿಂದ ಮೇಲೆ ಸ್ಥಗಿತಗೊಳ್ಳುವ ಕನ್ನಡ ವಿಶ್ವಕೋಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 19:58 IST
Last Updated 12 ಫೆಬ್ರುವರಿ 2020, 19:58 IST
kanaja
kanaja   

ಬೆಂಗಳೂರು: ಕನ್ನಡದ ಆನ್‌ಲೈನ್ ವಿಶ್ವಕೋಶ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಹತ್ತು ವರ್ಷಗಳ ಹಿಂದೆ ಆರಂಭವಾದ ರಾಜ್ಯದ ಹೆಮ್ಮೆಯ ‘ಕಣಜ’ ಮೇಲಿಂದ ಮೇಲೆ ಸ್ಥಗಿತಗೊಳ್ಳುವ ಮೂಲಕ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

‘ಇಲ್ಲಿ ಬಳಸಲಾದ ತಂತ್ರಜ್ಞಾನ ಹಳೆಯದು, ವಿಷಯಗಳನ್ನು ಹೊಸದಾಗಿ ಸೇರಿಸಿಕೊಂಡಿಲ್ಲ, ವೆಬ್‌ಸೈಟ್‌ ಮೇಲಿಂದ ಮೇಲೆ ಸ್ಥಗಿತಗೊಳ್ಳುತ್ತಿದೆ’ ಎಂದು ಹಲವಾರು ಬಳಕೆದಾರರು ದೂರಿದ್ದಾರೆ.

ಕರ್ನಾಟಕ ಜ್ಞಾನ ಆಯೋಗದಿಂದ ಅಭಿವೃದ್ಧಿಪಡಿಸಲಾದ ‘ಕಣಜ’ವನ್ನು‘ವಿಕಿಪೀಡಿಯಾ’ಗೆ ಹೋಲಿಸಲಾಗಿತ್ತು. ಕನ್ನಡದ ಏಕೈಕ ಡಿಜಿಟಲ್‌ ಗ್ರಂಥಾಲಯ ಇದು ಎಂಬಂತೆ ಆರಂಭದಲ್ಲಿ ಬಿಂಬಿಸಲಾಗಿತ್ತು. ಒಂದು ಸಾವಿರಕ್ಕೂ ಅಧಿಕ ಪುಸ್ತಕಗಳು, ಆನ್‌ಲೈನ್‌ ನಿಘಂಟು ಹಾಗೂ ರಾಜ್ಯಪತ್ರಗಳನ್ನು ಒಳಗೊಂಡ ಈ ವೆಬ್‌ಸೈಟ್‌ ಅನ್ನು 2009ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು.

ADVERTISEMENT

2 ವರ್ಷದ ಹಿಂದೆ ಪರಿಷ್ಕರಣೆ

‘ಕಣಜ’ದ ವಿಷಯಗಳನ್ನು ಮತ್ತು ತಂತ್ರಜ್ಞಾನವನ್ನು ಕೊನೆಯ ಬಾರಿ 2018ರಲ್ಲಿ ಅಪ್‌ಡೇಟ್‌ ಮಾಡಲಾಗಿದೆ. ಇದಕ್ಕೆ ಸಿಬ್ಬಂದಿ ಕೊರತೆಯೂ ಇದೆ’ ಎಂದು ಇಲಾಖೆ ಹೇಳಿಕೊಂಡಿದೆ.

‘ಕಣಜ ವೆಬ್‌ಸೈಟ್‌ ಸರ್ಚ್ ಎಂಜಿನ್‌ ಸೌಲಭ್ಯ ಹೊಂದಿಲ್ಲ, ಹೀಗಾಗಿ ಗೂಗಲ್‌ನಲ್ಲಿ ಕಣಜ ಕಾಣುವುದಿಲ್ಲ’ ಎಂದು ‘ವಿಶ್ವ ಕನ್ನಡ’ ಆನ್‌ಲೈನ್‌ ನಿಯತಕಾಲಿಕದ ಸಂಪಾದಕ ಯು.ಬಿ.ಪನವಜ ಹೇಳಿದರು. ‘ಎಲ್ಲಾ ತೊಂದರೆಗಳನ್ನು ಶೀಘ್ರ ಸರಿಪಡಿಸಲು ಸೂಚಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಆರ್‌.ಆರ್.ಜನ್ನು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.