ADVERTISEMENT

ಸಪ್ತ ಭಾಷೆಗಳಲ್ಲಿ ಟ್ರಾವೆಲ್ಯಾರಿ ಆ್ಯಪ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST
ಟ್ರಾವೆಲ್ಯಾರಿ ಆ್ಯಪ್
ಟ್ರಾವೆಲ್ಯಾರಿ ಆ್ಯಪ್   

ಆನ್-ಲೈನ್ ಮೂಲಕ ಬಸ್ ಪ್ರಯಾಣದ ಟಿಕೆಟ್ಟನ್ನು ಕಾಯ್ದಿರಿಸುವ ಪ್ರಮುಖ ಸಂಸ್ಥೆಗಳಲ್ಲೊಂದಾದ ‘ಟ್ರಾವೆಲ್ಯಾರಿ’ಯು ಕನ್ನಡ ಸೇರಿದಂತೆ ತಮಿಳು, ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವಂತಹ ಆ್ಯಪ್ ಸೇವೆಯನ್ನು ಆರಂಭಿಸಿದೆ.

ದೇಶದಾದ್ಯಂತ ಇರುವ 2 ಮತ್ತು 3ನೇ ಸ್ತರದ ನಗರಗಳನ್ನು ಗಮನದಲ್ಲಿ ಇಟ್ಟುಕೊಂಡು, ಆಯಾ ಪ್ರದೇಶದ ಸ್ಥಳೀಯ ಭಾಷೆಗಳಲ್ಲೇ ಸಂಸ್ಥೆಯ ಸೇವೆಗಳು ಸಿಗುವಂತೆ ಮಾಡುವುದು ಇದರ ಹಿಂದಿನ ಸದಾಶಯವಾಗಿದೆ.

2 ಮತ್ತು 3ನೇ ಸ್ತರದ ನಗರಗಳಲ್ಲಿ ದಿನದಿಂದ ದಿನಕ್ಕೆ ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚಿನ ಜನರು ಆನ್-ಲೈನ್ ಶಾಪಿಂಗ್, ಬಿಲ್ ಗಳ ಪಾವತಿ, ಟಿಕೆಟ್ ಕಾಯ್ದಿರಿಸುವಿಕೆ ಮುಂತಾದ ಕೆಲಸಗಳಿಗೆ ಸ್ಮಾರ್ಟ್-ಫೋನುಗಳನ್ನೇ ಅವಲಂಬಿಸುತ್ತಿದ್ದಾರೆ. ಇದನ್ನು ಗಮನಿಸಿ, ‘ಟ್ರಾವೆಲ್ಯಾರಿ’ ಸಂಸ್ಥೆಯು ಕೂಡ ಪ್ರಾದೇಶಿಕ ಭಾಷೆಗಳಲ್ಲೇ ಆ್ಯಪ್ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದ ಹೆಚ್ಚು ಜನರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸುವುದು ಕೂಡ ಸಾಧ್ಯವಾಗಲಿದೆ.

ADVERTISEMENT

‘ನಮ್ಮ ಸಂಸ್ಥೆ ಭಾರತೀಯರಿಂದ ಭಾರತೀಯರಿಗೋಸ್ಕರ ಅಭಿವೃದ್ಧಿ ಪಡಿಸಿರುವಂತಹ ಒಂದು ಬ್ರ್ಯಾಂಡ್. ದೇಶದ ವೈವಿಧ್ಯವನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಭಾರತೀಯ ಭಾಷೆಗಳಲ್ಲಿ ಸುಗಮವಾಗಿ ವ್ಯವಹರಿಸುವಂತಹ ಜನರ ಸಾಮರ್ಥ್ಯವನ್ನು ಗಮನಿಸಿ ಈಗ ಈ ಆ್ಯಪ್ ಸೇವೆಗೆ ಚಾಲನೆ ನೀಡಿದ್ದೇವೆ. ಟ್ರಾವೆಲ್ಯಾರಿಯು ಸದಾ ಗ್ರಾಹಕಕೇಂದ್ರಿತ ಹಿತಾಸಕ್ತಿಯುಳ್ಳ ಸಂಸ್ಥೆಯಾಗಿದೆ‘ ಎಂದು ಟ್ರಾವೆಲ್ಯಾರಿ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಲಾಮಾ ತಿಳಿಸಿದ್ದಾರೆ.

ಪ್ರಯಾಣಕ್ಕೆ ಬೇಕಾದ ಸೌಲಭ್ಯಗಳನ್ನು ಸುಗಮವಾಗಿ ಒದಗಿಸಲೆಂದು ಟ್ರಾವೆಲ್ಯಾರಿಯು ಹೊಸಹೊಸ ತಂತ್ರಜ್ಞಾನಾಧಾರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.

ಈ ನಿಟ್ಟಿನಲ್ಲಿ ಸಂಸ್ಥೆಯು ಬಸ್ ಟ್ರ್ಯಾಕಿಂಗ್ ಟೆಕ್ನಾಲಜಿ, ಬಸ್ಸುಗಳ ಆಗಮನದಲ್ಲಾಗುವ ಏರುಪೇರನ್ನು ತಿಳಿಸುವ ತಂತ್ರಜ್ಞಾನ ಮತ್ತು ಇನ್ನಿತರ ಯಾವುದೇ ಬಗೆಯ ತೊಂದರೆಗಳು ಎದುರಾದಲ್ಲಿ ಅದನ್ನು ಕೂಡ ತಿಳಿಸುವಂತಹ ತಂತ್ರಜ್ಞಾನವನ್ನು ಕೂಡ ಅಳವಡಿಸಿಕೊಂಡಿದೆ.

ಈ ಮೂಲಕ ಪ್ರಯಾಣವನ್ನು ಹಿತಕರ, ಸಂತೋಷದಾಯಕ ಮತ್ತು ವಿಶ್ವಾಸಾರ್ಹವನ್ನಾಗಿ ಮಾಡುವಲ್ಲಿ ಟ್ರಾವೆಲ್ಯಾರಿಯು ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.