ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಟ್ರೋಲ್‌ ಆದ ಸಚಿವ ಅಲ್ಫೋನ್ಸ್ ಕಣ್ಣಂತಾನಂ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 11:57 IST
Last Updated 23 ಆಗಸ್ಟ್ 2018, 11:57 IST
   

ತಿರುವನಂತಪುರ:ಕೇರಳ ಪ್ರವಾಹ ಪರಿಹಾರ ಶಿಬಿರದಲ್ಲಿ ನಿದ್ರಿಸುತ್ತಿರುವ ಚಿತ್ರವನ್ನು ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಮಂಗಳವಾರ ರಾತ್ರಿ ಪರಿಹಾರ ಶಿಬಿರವೊಂದದರಲ್ಲಿ ನಿದ್ರಿಸುತ್ತಿರುವ ಚಿತ್ರವನ್ನು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಾಕಿದ್ದರು. ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗಿತ್ತು. ಇದೀಗಕಣ್ಣಂತಾನಂ ಸ್ಲೀಪ್‌ಚಾಲೆಂಜ್‌ಗೆ ಟ್ರೋಲ್‌ ಆಗಿದ್ದಾರೆ.

ನೆಟ್ಟಿಗರು#ಕಣ್ಣಂತಾನಂಸ್ಲೀಪ್‌ಚಾಲೆಂಜ್‌ (#KannanthanamSleepChallenge) ಎಂದು ಹಾಕಿ ತಾವು ನಿದ್ರಿಸುತ್ತಿರುವ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ.

ADVERTISEMENT

ಅಲ್ವೀನ್‌ ಕೆ ವಿಲ್ಸನ್‌ ಎಂಬುವರು ತಾವು ನಿದ್ರಿಸುತ್ತಿರುವ ಚಿತ್ರ ಹಾಕಿ ’ನಾನೊಂದು ಗಂಟೆಯಿಂದ ನಿದ್ರಿಸುತ್ತಿದ್ದೇನೆ ಎಂಬ ಪೋಸ್ಟ್ ಹಾಕಿದ್ದಾರೆ.

ಸುಕು ಕೇರಳೈಟ್ ಎಂಬಖಾತೆದಾರರು, ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸುವಾಗ ಪರಿಹಾರ ಕೇಂದ್ರದಲ್ಲಿಅಲ್ಫೋನ್ಸ್ ಕಣ್ಣಂತಾನಂ ಅವರು ಮಲಗಿರುವುದನ್ನು ಕಾಣುತ್ತಾರೆ. ಈ ಚಿತ್ರವನ್ನು ಫೋಟೊಶಾಫ್‌ನಲ್ಲಿ ಎಡಿಟ್‌ ಮಾಡಲಾಗಿದೆ.

ಅರವಿಂದ್‌ ಎಂಬುವರ ತಾವು ಮಲಗಿರುವ ಚಿತ್ರ ಹಾಕಿ#ಕಣ್ಣಂತಾನಂಸ್ಲಿಪ್‌ಚಾಲೆಂಜ್‌ ಎಂದು ಟ್ಯಾಗ್ ಮಾಡಿದ್ದಾರೆ.

ನೀವು ಸುಶಿಕ್ಷಿತ ಜನ ಸೇವಕರು ಮತ್ತು ಅನುಭವಿ ರಾಜಕಾರಣಿ, ನಿಮ್ಮಿಂದ ಪ್ರಬುದ್ಧ ಮತ್ತು ಜವಾಬ್ದಾರಿಯತ ನಡವಳಿಕೆಯನ್ನು ಮಾತ್ರ ನಾವು ನಿರೀಕ್ಷೆ ಮಾಡುತ್ತೇವೆ. ನೀವು ಪರಿಹಾರ ಶಿಬಿರದಲ್ಲಿ ಮಲಗಿರುವ ಚಿತ್ರಹಾಕಿರುವುದುಪರಿಹಾರ ಕಾರ್ಯಗಳನ್ನು ಅಣಕಿಸುವಂತಿದೆ ಎಂದು ಜೆಫ್ಫ್‌ಶಾನ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.