ADVERTISEMENT

ಜೆಸಿಬಿ ಬಳಸಿ 12 ಅಡಿ ಉದ್ದದ ಬೃಹತ್ ಮೊಸಳೆಯ ರಕ್ಷಣೆ: ಅರಣ್ಯ ಇಲಾಖೆಗೆ ಛೀಮಾರಿ

ಉತ್ತರ ಪ್ರದೇಶದ ಲಲಿತಪುರ್ ಬಳಿಯ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ರಕ್ಷಿಸಲಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 6:14 IST
Last Updated 19 ಮಾರ್ಚ್ 2025, 6:14 IST
<div class="paragraphs"><p>ಉತ್ತರ ಪ್ರದೇಶದ ಲಲಿತಪುರ್ ಬಳಿಯ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ರಕ್ಷಿಸಲಾಗಿದೆ.</p></div>

ಉತ್ತರ ಪ್ರದೇಶದ ಲಲಿತಪುರ್ ಬಳಿಯ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ರಕ್ಷಿಸಲಾಗಿದೆ.

   

ಬೆಂಗಳೂರು: ಉತ್ತರ ಪ್ರದೇಶದ ಲಲಿತಪುರ್ ಬಳಿಯ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ರಕ್ಷಿಸಲಾಗಿದೆ.

ಗೋಧಿ ಹೊಲಕ್ಕೆ ಮೊಸಳೆ ಬಂದಿರುವುದನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದರು.

ADVERTISEMENT

ಆದರೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದಿದ್ದು ಜೆಸಿಬಿ ತೆಗೆದುಕೊಂಡು. ಮೊದಲು ಹಗ್ಗದಿಂದ ಬೃಹತ್ ಮೊಸಳೆಯನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಆದರೆ, ಅದು ಸಾದ್ಯವಾಗಿಲ್ಲ.

ಕೊನೆಗೆ ಜೆಸಿಬಿ ಯಂತ್ರ ಬಳಸಿ ಬೃಹತ್ ಮೊಸಳೆಯನ್ನು ಒಂದೇ ಯತ್ನದಲ್ಲಿ ಟ್ರ್ಯಾಕ್ಟರ್‌ಗೆ ಎಸೆಯಲಾಗಿದೆ.ಈ ವೇಳೆ ಜೆಸಿಬಿಯ ಸಲಕರಣೆಯ ಕಬ್ಬಿಣದ ಹಲ್ಲುಗಳು ಮೊಸಳೆಗೆ ತಾಗಿ ಗಾಯವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದರಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ವನ್ಯಪ್ರಾಣಿಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆಗೆ ಗೊತ್ತಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಉತ್ತರ ಪ್ರದೇಶದ ಅರಣ್ಯ ಇಲಾಖೆ ವಿರುದ್ಧ ಟೀಕೆ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.