ADVERTISEMENT

ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಬರೀ ಮಕ್ಕಳಲ್ಲ...!
ಹೆತ್ತವರ ಕಲಹ: ಕೂಸು ಬಡವಾಯ್ತೇ? (ಡಾ. ಕೆ.ಎಸ್. ಶುಭ್ರತಾ, ಏಪ್ರಿಲ್ 13) ಲೇಖನ ಕೌಟುಂಬಿಕ ದೌರ್ಜನ್ಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ವಿವರಿಸಿದೆ. ಎಷ್ಟೇ ಆಗಲಿ ಅವರಿನ್ನೂ ಮಕ್ಕಳು, ಇನ್ನೂ ಏನೂ ಅರ್ಥವಾಗದು ಎಂದುಕೊಂಡು ಮನೆಯಲ್ಲಿ ಜಗಳ, ವಾಗ್ಯುದ್ಧದಲ್ಲಿ ನಿರತರಾಗುವ ಪೋಷಕರೇ ಬಹಳಷ್ಟು ಮಂದಿ. ಆದರೆ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿ ಇರುತ್ತದೆ ಎಂಬುದನ್ನು ಲೇಖನ ಮನದಟ್ಟು ಮಾಡಿಸಿಕೊಟ್ಟಿದೆ.
ಸವಿತಾ, ಬೆಂಗಳೂರು

ಬರೀ ಹಿರಿಯರಿಗಷ್ಟೇ ಅಲ್ಲ ಮಕ್ಕಳಿಗೂ ಮನಸ್ಸಿದೆ ಎಂಬುದನ್ನು ಲೇಖನ ಒತ್ತಿ ಹೇಳಿದೆ. ಹಿರಿಯರ ನಡೆ- ನುಡಿಯ ಪ್ರಭಾವ ಹಲವು ಬಾರಿ ಮಗುವಿನಲ್ಲಿ ತಕ್ಷಣಕ್ಕೆ ಗೋಚರಿಸದೇ ಇರಬಹುದು.

ಆದರೆ ಅದು ಮಕ್ಕಳ ಸುಪ್ತಾವಸ್ಥೆಯಲ್ಲಿ ಅಡಗಿ ಕುಳಿತು ಮತ್ಯಾವಾಗಲೋ ಅದು ಹೊರಬರುತ್ತದೆ ಎಂಬುದನ್ನು ಹಿರಿಯರು ಮತ್ತು ಪೋಷಕರು ಮರೆಯಬಾರದು.
ಲೋಕನಾಥ್, ಮೈಸೂರು

ಉಸಿರಾಟದ ಮಹತ್ವವನ್ನು ತಿಳಿಸಿಕೊಟ್ಟ (ಉಸಿರಾಡಿ ಹಗುರಾಗಿ) ಭರತ್ ಮತ್ತು ಶಾಲನ್ ಸವೂರ್ ಅವರಿಗೆ ಧನ್ಯವಾದ.
ಚಂದ್ರಶೇಖರ್, ಹುಬ್ಬಳ್ಳಿ

ADVERTISEMENT

ಮಸಾಲೆಗೂ ಮಹಿಳೆಯ ಕಾಯ ಮತ್ತು ಕಾಯಕಕ್ಕೂ ಇರುವ ಸಂಬಂಧವನ್ನು (ರೇಣುಕಾ ಎಸ್. ಸಿದ್ನಾಳ) ಎಷ್ಟು ಚಂದಾಗಿ ವಿವರಿಸಿದ್ದಾರ್ರೀ...
ಪೂರ್ಣಿಮಾ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.