ಬೇಸಿಗೆ ಮರಳುತ್ತಿದಂತೆಯೇ ಬಾಯಲ್ಲಿ ನೀರೂರಿಸುವ ಮಾವಿನ ಸೀಸನ್ ಆರಂಭವಾಗುತ್ತದೆ. ಮಾವು ಎಂದರೆ ಎಲ್ಲರಿಗೂ ಎರಡು ಹೊಟ್ಟೆ. ಆದರೆ ಮಾವಿನ ನಿಜವಾದ ಉಪಯೋಗ ಹೆಚ್ಚಿನ ಜನಕ್ಕೆ ತಿಳಿದಿರುವುದಿಲ್ಲ. ಯಾರು, ಯಾವಾಗ, ಹೇಗೆ, ಎಷ್ಟು ಪ್ರಮಾಣದಲ್ಲಿ ಮಾವು ಸೇವಿಸಬಹುದು ಎಂಬ ಬಗ್ಗೆಯೂ ಮಾಹಿತಿ ಇರುವುದಿಲ್ಲ.
ಮಾವಿನಲ್ಲಿ ಬೀಟಾ ಕ್ಯಾರೊಟೀನ್, ವಿಟಾಮಿನ್ ಇ, ಸೆಲೇನಿಯಂ ಹಾಗೂ ಆಂಟಿ ಆಕ್ಸಿಡಂಟ್‌ನಂತಹ ಉಪಯುಕ್ತ ಪೋಷಕಾಂಶಗಳಿದ್ದು, ಕ್ಯಾನ್ಸರ್ ನಂತಹ ಮಾರಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯವನ್ನು ವೃದ್ಧಿಸಲೂ ಈ ಪೋಷಕಾಂಶಗಳು ಅತ್ಯಂತ ಪ್ರಯೋಜನಕಾರಿ ಎಂಬುದು ತಿಳಿದು ಬಂದಿದೆ. ಅಲ್ಲದೇ ಮಾವಿನಲ್ಲಿ ಸದಾ ಸರಳ ರೀತಿಯ ಕಾರ್ಬೋಹೈಡ್ರೇಟ್ಸ್ ಹಾಗೂ ಕ್ಯಾಲೋರಿಗಳು ಹೇರಳವಾಗಿರುತ್ತವೆ. ಸಿಹಿಯಾದ ೧೦೦ ಗ್ರಾಂ ಮಾವು ಸೇವಿಸದಲ್ಲಿ ೭೦ ಕಿಲೊ ಕ್ಯಾಲೊರಿ ಹಾಗೂ ೧೩ ಗ್ರಾಂ ಸಕ್ಕರೆ ಸೇವಿಸಿದಂತಾಗುತ್ತದೆ.
ಈ ರೀತಿಯ ಅತ್ಯಧಿಕ ಎನರ್ಜಿ ಹಾಗೂ ಹೆಚ್ಚಿನ ಸಕ್ಕರೆ ಅಂಶ ಒಳೊಂಡಿರುವ ಕಾರಣ ಮಧುಮೇಹಿಗಳು, ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಡಯಟ್ ಪ್ರಿಯರು ಸೂಕ್ತ ರೀತಿಯ ಕಾಳಜಿ ವಹಿಸುವ ಮೂಲಕ ಮಾವು ಸೇವಿಸುವ ಅಗತ್ಯವಿರುತ್ತದೆ.
ಇಂತಹ ವ್ಯಕ್ತಿಗಳು ದಿನವೊಂದಕ್ಕೆ ೧೨೫ ಗ್ರಾಂ ನಷ್ಟು ಮಾತ್ರವೇ (ಅರ್ಧ ಭಾಗ) ಮಾವನ್ನು ಸೇವಿಸದರೆ ಆರೋಗ್ಯಕ್ಕೆ ಉತ್ತಮ.
ಬೆಳಗಿನ ಬ್ರೇಕ್‌ಫಾಸ್ಟ್ ಹಾಗೂ ಮಧ್ಯಾಹ್ನದ ಉಟದ ಸಮಯದ ಮಧ್ಯದ ಬಿಡುವಿನಲ್ಲಿ ಅಥವಾ ಸಂಜೆಯ ಸ್ನ್ಯಾಕ್ಸ್ ವೇಳೆ ಮಾವು ಸೇವಿಸಿದಲ್ಲಿ ಉತ್ತಮ, ಮಧುಮೇಹ ಸಮಸ್ಯೆ ಇಲ್ಲದವರು ದಿನಕ್ಕೆ ೨೫೦ ಗ್ರಾಂ ವರೆಗೂ ಮಾವನ್ನು ಸೇವಿಸಬಹುದು. ಇದಕ್ಕಾಗಿ ದಿನದಲ್ಲಿ ಸೇವನೆ ಮಾಡುವ ಇತರೆ ಆಹಾರ ಪದಾರ್ಥಗಳಾದ ಅನ್ನ ಅಥವಾ ಗೋಧಿಯ ಆಹಾರ ಸೇವನೆ ಕಡಿಮೆ ಮಾಡಬೇಕು.
ಇವೆಲ್ಲದರ ಜತೆಗೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹಾಗೂ ಗ್ಲೈಸೆಮಿಕ್ ಲೋಡ್ (ಜಿಎಲ್) ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಜಿಐ ಎಂದರೆ ಸೇವನೆಯ ನಂತರ ಎಷ್ಟು ಬೇಗ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದು, ಮತ್ತೊಂದೆಡೆ ಜಿಎಲ್ ಎಂದರೆ ಸೇವಿಸಿದ ಕಾರ್ಬೋಹೈಡ್ರೇಟ್ಸ್ ಎಷ್ಟು ಬೇಗ ಸಕ್ಕೆಯ ಅಂಶವಾಗಿ ಪರಿವರ್ತನೆಯಾಗುತ್ತದೆ ಎಂದು. ಒಂದು ಯೂನಿಟ್‌ನಷ್ಟು ಗ್ಲೈಸೆಮಿಕ್ ಲೋಡ್ ರಕ್ತದ ಮೇಲೆ ಒಂದು ಗ್ರಾಂ ಗ್ಲುಕೋಸ್ ನಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಜಿಎಲ್ ಪ್ರಮಾಣ ಕಡಿಮೆ ಇದ್ದಷ್ಟು ಉತ್ತಮ.
೧೨೫ ಗ್ರಾಂ ನಷ್ಟು ಮಾವಿನಲ್ಲಿ ೬೦ ರಷ್ಟು ಗ್ಲೈಸೆಮಿಕ್ ಅಂಶವಿರುತ್ತದೆ. ಹೀಗಾಗಿ ಮಧುಮೇಹಿ ರೋಗಿಗಳು ಇರತ ಆಹಾರ ಪದಾರ್ಥಗಳ ಸೇವನೆಯೊಂದಿಗೆ ಮಾವಿನ ಸೇವನೆಯಲ್ಲಿ ಸಮತೋಲನ ತಂದುಕೊಳ್ಳದೇ ಇದ್ದಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಮತ್ತೊಂಡೆ ತೂಕ ಇಳಿಸಲು ಇಚ್ಚಿಸುತ್ತಿರವಂತಹ ವ್ಯಕ್ತಿಗಳು ಮಾವಿನ ಸೇವನೆ ನಿಯಂತ್ರಣದಲ್ಲಿ ಇಡದೇ ಹೋದಲ್ಲಿ ತೂಕ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.
ಇನ್ನು ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳು ದಿನವೊಂದರಲ್ಲಿ ೨೫೦ ರಿಂದ ೩೦೦ ಗ್ರಾಂ ನಷ್ಟು ಮಾವನ್ನು ಸೇವಿಸಬಹುದಾಗಿದೆ. ಇನ್ನು ನಿತ್ಯ ವ್ಯಾಯಾಮ ಮಾಡುವಂತಹ ಅಭ್ಯಾಸ ಹೊಂದಿರುವವರು ಹೆಚ್ಚಿನ ಮಾವು ಸೇವಿಸಿದಲ್ಲೂ ತೂಕ ಹೆಚ್ಚುತ್ತದೆ ಎಂದು ಆತಂಕ ಪಡುವ ಅಗತ್ಯ ಇರುವುದಿಲ್ಲ.
ಹೀಗಾಗಿ ಮಾವು ಸೇವನೆಯಿಂದ ಸಿಗುವ ಪೋಷಕಾಂಶಗಳು ಹಾಗೂ ಕ್ಯಾಲೊರಿ ಕುರಿತಾಗಿ ತಿಳಿದುಕೊಳ್ಳುವುದು ಉತ್ತಮ. ಮಾವಿನ ಜೆಲ್ಲಿ, ಜ್ಯಾಮ್ ಹಾಗೂ ಜ್ಯೂಸ್‌ಗಳ ಬದಲಾಗಿ ಮಾವಿನ ಹಣ್ಣನ್ನು ನೇರವಾಗಿ ಸೇವಿಸುವುದು ಒಳಿತು.
(ಮಾಹಿತಿಗೆ ೦೮೦೪೯೬೯೪೯೬೯)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.