ADVERTISEMENT

ಮೆಕ್ಕೆಜೋಳದ ವಿಶೇಷ...

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2010, 10:55 IST
Last Updated 24 ಡಿಸೆಂಬರ್ 2010, 10:55 IST

ಕಾರ್ನ್ ಕೋಸಂಬರಿ
ಬೇಕಾಗುವ ಸಾಮಾನುಗಳು :4 ಎಳೆಯ ಮೆಕ್ಕೆಜೋಳದ ತೆನೆಗಳು, 2 ಹಸಿ ಮೆಣಸಿನಕಾಯಿ, 2 ಎಸಳು ಕರಿಬೇವು, ಸ್ವಲ್ಪ ಕೊತ್ತಂಬರಿ, ಸ್ವಲ್ಪ ಜೀರಿಗೆ, ಸ್ವಲ್ಪ ಸಾಸುವೆ, 1/2  ಬಟ್ಟಲು ತೆಂಗಿನಕಾಯಿ, ಸ್ವಲ್ಪ ಉಪ್ಪು, 2 ಚಮಚ ಎಣ್ಣೆ.

ಮಾಡುವ ವಿಧಾನ :ಎಳೆಯ ತೆನೆಗಳಿಂದ ಮೆಕ್ಕೆ ಜೋಳದ ಕಾಳುಗಳು ಬಿಡಿಸಿರಿ. ಹಸಿ ಕೊಬ್ಬರಿ ತುರಿದುಕೊಳ್ಳಿ. ಹಸಿಮೆಣಸಿನಕಾಯನ್ನು ಸಣ್ಣಕೆ ಹೆಚ್ಚಿಕೊಳ್ಳಿ. ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಟ್ಟುಕೊಳ್ಳಿ.ಒಲೆಯಮೇಲಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಮೆಕ್ಕೆ ಜೋಳದ ಬಿಡಿಕಾಳು, ತುರಿದ ಹಸಿ ಕೊಬ್ಬರಿ, ಸಣ್ಣಕ್ಕೆ ಹೆಚ್ಚಿದ ಕೊತ್ತಂಬರಿ, ಸ್ವಲ್ಪ ಉಪ್ಪು ಸೇರಿಸಿ ಕಲಿಸಿರಿ. ರುಚಿಯಾದ ಕಾರ್ನ್ ಕೋಸಂಬರಿ ರೆಡಿ.

ಕಾರ್ನ್ ಮಂಚೂರಿ
ಬೇಕಾಗುವ ಸಾಮಾನುಗಳು: 4 ಎಳೆಯ ಮೆಕ್ಕೆಜೋಳದ ತೆನೆಗಳು, 2 ಗಡ್ಡೆ ಬೆಳುಳ್ಳಿ, 2 ದೊಡ್ಡ ಚಮಚ ಕಾರ್ನ್ ಫ್ಲೋರ್, 1 ಚಮಚ ಟೇಸ್ಟಿ ಪೌಡರ್, 2 ಟೀ ಚಮಚ ಕೆಂಪು ಖಾರದ ಪುಡಿ, 1/4  ಚಮಚ ಕೆಂಪು ಪುಡ್ ಕಲ್ಲರ್, 2 ಬಟ್ಟಲು ಎಣ್ಣೆ, 1 ಬಟ್ಟಲು ಕಡ್ಲೇಬೆಳೆ ಹಿಟ್ಟು, 1 ಬಟ್ಟಲು ಅಕ್ಕಿ ಹಿಟ್ಟು. 1 ಬಟ್ಟಲು ಟೊಮೆಟೊ ಸಾಸ್, 1 ಕಟ್ಟು ಕೊತ್ತಂಬರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಎಳೆಯ ಮೆಕ್ಕೆ ಜೋಳದ ತೆನೆಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಕಡಲೇಬೇಳೆ ಹಿಟ್ಟು , ಕಾರ್ನ್ ಫ್ಲೋರ್, ಟೇಸ್ಟೀ ಪೌಡರ್, ಖಾರದ ಪುಡಿ, ಸ್ವಲ್ಪಪುಡ್ ಕಲರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ಮಿಕ್ಸಿಯಲ್ಲಿ ಮಾಡಿದ ಪೇಸ್ಟ್ ಸೇರಿಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ವಡೆ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ.

ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಣ್ಣಗೆ ಹೆಚ್ಚಿಕೊಂಡ ಮೆಕ್ಕೆ ಜೋಳದ ತುಂಡುಗಳನ್ನು ಕಲಸಿಟ್ಟುಕೊಂಡ ಹಿಟ್ಟಲ್ಲಿ ಒಂದೊಂದಾಗಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಾಗಿ ಕರಿಯಿರಿ. ಆಗ ಕಾರ್ನ್ ಮಂಚೂರಿ ತಯಾರಾಗುತ್ತದೆ. ಇದನ್ನು ಟೊಮೆಟೊಟೊಸಾಸ್‌ನೊಂದಿಗೆ ಸವಿಯುವ ಮಜವೇ ಬೇರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.